ಪುತ್ತೂರು : ಅಲ್ಪ ಸಮಯದ ಅನಾರೋಗ್ಯದಿಂದಾಗಿ ಕೌಡಿಚ್ಚಾರು ನಿವಾಸಿ ಕವಿತಾ (30) ರವರು ಜೂ.19 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತಃ ಕೆದಂಬಾಡಿಯವರಾದ ಕವಿತಾ ರವರು ವಿವಾಹವಾದ ನಂತರ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಬಪ್ಪಪುಂಡೇಲಿನಲ್ಲಿ ವಾಸವಿದ್ದರು.
ಕವಿತಾ ರವರು ಕೆಲ ಸಮಯಗಳಿಂದ ಅನಾರೋಗ್ಯದಿಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.

ಮೃತರು ಪತಿ ರಾಜೇಶ್ ಪ್ರಸಾದ್ (ಆರ್.ಪಿ) ಕೌಡಿಚ್ಚಾರು, ಓರ್ವ ಪುತ್ರ, ಅತ್ತೆ, ಮಾವ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

























