ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾಸುಕಿ ನಾಗನ ಸನ್ನಿಧಿಯಲ್ಲಿ ಅರ್ಚಕರಾಗಿದ್ದ ಕೋಟೆ ಮಹಾಲಿಂಗೇಶ್ವರ ಭಟ್ (58) ರವರು ನಿಧನರಾದರು.

ಮೂಲತಃ ಬೆಳ್ಳಾರೆ ಕೋಟೆ ಮನೆತನದವರಾದ ಮಹಾಲಿಂಗೇಶ್ವರ ಭಟ್ ರವರು ಪುತ್ತೂರು ಕೊಡಿಪ್ಪಾಡಿ ಸಮೀಪದ ಬಿರಾವು ಎಂಬಲ್ಲಿ ವಾಸ್ತವ್ಯ ಹೊಂದಿದ್ದರು.
ಅಲ್ಪಕಾಲದ ಅಸೌಖ್ಯದಿಂದಾಗಿ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.


























