ಪುತ್ತೂರು : ಇನ್ನರ್‌ವೀಲ್ ಕ್ಲಬ್ ಪುತ್ತೂರು ಮತ್ತು ಪುತ್ತೂರು ಸಿಟಿ ಹಾಸ್ಪಿಟಲ್ ಚಾರಿಟೇಬಲ್ ಟ್ರಸ್ಟ್ ಜಂಟಿಯಾಗಿ ಜೂ.21 ರಂದು ಪುತ್ತೂರು ಸಿಟಿ ಹಾಸ್ಪಿಟಲ್‌ನಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಡಾ. ಚೇತನ ಮುದ್ರಜೆ (ಬಿ.ಎ.ಎಮ್.ಎಸ್ ವೈ.ಐ.ಸಿ) ಸಹಕರಿಸಿದರು.

ಪುತ್ತೂರು ಸಿಟಿ ಹಾಸ್ಪಿಟಲ್‌ನ ಪೂರ್ವ ಅಧ್ಯಕ್ಷರಾದ ಮಂಜುಳಾ ಭಾಸ್ಕರ್, ಮಕ್ಕಳ ತಜ್ಞ ಡಾ. ಎಮ್.ಎಸ್ ಶೆಣೈ, ಇನ್ನರ್‌ವೀಲ್ ಸಂಸ್ಥೆಯ ನಿರ್ದೇಶಕರುಗಳಾದ ವಿಜಯಲಕ್ಷ್ಮೀ ಶೆಣೈ, ರಾಜಿ ಬಲರಾಮ್, ವೀಣಾ ಬಿ.ಕೆ, ಇನ್ನರ್‌ವೀಲ್ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಹಾಗೂ ಇತರ ಇನ್ನರ್‌ವೀಲ್ ಸದಸ್ಯರು ಪಾಲ್ಗೊಂಡರು.
ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆ ನಡೆಯಿತು. ಸಂಧ್ಯಾ ಸಾಯ ಪ್ರಾರ್ಥಿಸಿದರು. ವಚನ ಜಯರಾಮ್ ಧನ್ಯವಾದ ಸಮರ್ಪಿಸಿದರು.

























