ಬಂಟ್ವಾಳ : ಸೂರಿಕುಮೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಚರಂಡಿಗೆ ಕಾರೊಂದು ಬಿದ್ದಿದ್ದು, ಅದನ್ನು ಮೇಲೆತ್ತಲು ಅರುಣ್ ಕುಮಾರ್ ಪುತ್ತಿಲ ಸಹಾಯ ಮಾಡಿದರು.

ಮಂಗಳೂರಿನಿಂದ ತುರ್ತು ಕಾರ್ಯಕ್ರಮಕ್ಕೆ ಪುತ್ತೂರಿಗೆ ಆಗಮಿಸುತ್ತಿದ್ದಾಗ ರಾತ್ರಿ ವೇಳೆ ಕಾರೊಂದು ಚರಂಡಿಗೆ ಬಿದ್ದಿದ್ದನ್ನು ಗಮನಿಸಿದ ಅರುಣ್ ಪುತ್ತಿಲ ರವರು ತಕ್ಷಣ ತನ್ನ ಕಾರನ್ನು ನಿಲ್ಲಿಸಿ ತನ್ನ ಕಾರಲ್ಲಿದ್ದ ಆಪ್ತರೊಂದಿಗೆ ಸೇರಿ ಕಾರನ್ನು ಮೇಲೆತ್ತಲು ಸಹಾಯ ಮಾಡಿದರು.
ಧರ್ಮ ನೋಡದೇ ಸಂಕಷ್ಟದಲ್ಲಿದ್ದವರ ಕಾರನ್ನು ಮೇಲೆತ್ತಲು ಸಹಾಯ ಮಾಡಿದ ಅರುಣ್ ಕುಮಾರ್ ಪುತ್ತಿಲರ ನಡೆಗೆ ಅಲ್ಲಿ ನೆರೆದಿದ್ದವರು ಪ್ರಶಂಸಿದರು.

























