ಕಡಬ : ಕುಟ್ರುಪ್ಪಾಡಿ ಗ್ರಾಮದ ಹೊಸಮಠ ಉಳಿಪು ನಿವಾಸಿ
ಗಿರಿಯಪ್ಪ ಗೌಡ ರವರ ಪುತ್ರ ಸುಮಂತ್ (32) ಅನಾರೋಗ್ಯದಿಂದ ಜೂ.22 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಸುಮಂತ್ ಅವರು ಗುಂಡ್ಯ ಪರಶುರಾಮ ಕ್ರೇನ್ನಲ್ಲಿ ಕೆಲಸ ಮಾಡುತ್ತಿದ್ದರು.
ಸುಮಂತ್ ಅವರು ಕಳೆದ ಎರಡು ವರ್ಷಗಳಿಂದ ಅನಾರೋಗ್ಯಕ್ಕೆ
ಒಳಗಾಗಿದ್ದರು. ಕೆಲ ದಿನಗಳಿಂದ ಅವರ ಆರೋಗ್ಯದಲ್ಲಿ ಮತ್ತಷ್ಟೂ
ಏರುಪೇರಾಗಿದ್ದು, ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿ
ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಜೂ.22 ರಂದು ರಾತ್ರಿ
ನಿಧನರಾದರು.
ಮೃತರು ತಂದೆ ಗಿರಿಯಪ್ಪ ಗೌಡ, ತಾಯಿ ಇಂದಿರಾ, ಪತ್ನಿ, ಇಬ್ಬರು ಪುತ್ರರು ಹಾಗೂ ಸಹೋದರಿಯನ್ನು ಅಗಲಿದ್ದಾರೆ.

























