ವಿಟ್ಲ : ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ತಂಡವೊಂದು ಅಡ್ಡಗಟ್ಟಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ವ್ಯಕ್ತಿಯೋರ್ವರು ನೀಡಿದ ದೂರಿನ್ವಯ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ.
ಸಾಲೆತ್ತೂರು ಪಾಲ್ತಾಜೆ ನಿವಾಸಿ ಜಯಂತ (32) ಎಂಬವರು ನೀಡಿದ ದೂರಿನ ಮೇರೆಗೆ ಮುನ್ನ (ಸುದರ್ಶನ್), ಧನರಾಜ್ ರನ್ನು ಬಂಧಿಸಲಾಗಿದ್ದು, ಶರತ್, ಉದಯ ಪರಾರಿಯಾಗಿದ್ದಾರೆ.

ಜೂ.25 ರಂದು ಜಯಂತ ರವರು ಮಗುವಿನ ಚಿಕಿತ್ಸೆಯ ಬಗ್ಗೆ ಕ್ಲಿನಿಕ್ ಗೆ ಹೋಗುವರೇ ತಮ್ಮ ಆಟೋ ರಿಕ್ಷಾದಲ್ಲಿ ಪತ್ನಿ ರವರೊಂದಿಗೆ ಸದ್ರಿ ಆಟೋ ರಿಕ್ಷಾವನ್ನು ಜಯಂತ ರವರ ಸ್ನೇಹಿತ ಶಿವರಾಮ್ ರವರು ಚಲಾಯಿಸಿಕೊಂಡು ಹೋಗುತ್ತಾ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಸದಾಶಿವ ದೇವಸ್ಥಾನಕ್ಕೆ ಹೋಗುವ ದಾರಿ ಬಳಿಗೆ ತಲುಪಿದಾಗ ಸಾಲೆತ್ತೂರು ವೈನ್ ಶಾಪ್ ಕಡೆಯಿಂದ ಎರಡು ಮೋಟಾರ್ ಸೈಕಲ್ ಗಳಲ್ಲಿ ಮುನ್ನ ಯಾನೆ ಸುದರ್ಶನ್,ಶರತ್,ಧನು ಮತ್ತು ಉದಯ ರವರು ಬಂದು ಜಯಂತ ರವರ ಆಟೋ ರಿಕ್ಷಾವನ್ನು ಅಡ್ಡಗಟ್ಟಿ ಸಾಲೆತ್ತೂರಿನ ಹಿಂದೂ ನಾಯಕತ್ವದ ವಿಚಾರದಲ್ಲಿ ಮಾತಿಗೆ ಮಾತು ಬೆಳದಾಗ ಮುನ್ನ ಯಾನೆ ಸುದರ್ಶನನು ಜಯಂತ ರವರ ಪತ್ನಿಯ ಮೈ ಮೇಲೆ ಕೈ ಹಾಕಿ ದೂಡಿದಾಗ ತಡೆದ ಸಂಧರ್ಭದಲ್ಲಿ ಶರತ್,ಧನು ಮತ್ತು ಉದಯ ರವರು ಜಯಂತ ರನ್ನು ಆಟೋ ರಿಕ್ಷಾದಿಂದ ಎಳೆದು ರಸ್ತೆಗೆ ದೂಡಿ ಹಾಕಿ ಶರತ್ ನು ಅಲ್ಲೆ ಇದ್ದ ಮರದ ರೀಪಿನ ತುಂಡಿನಿಂದ ಮುಖಕ್ಕೆ ಹೊಡೆದುದಲ್ಲದೇ ಧನು ಮೂಗಿಗೆ ಕೈಯಿಂದ ಗುದ್ದಿದಾಗ ಮುನ್ನ ಮತ್ತು ಉದಯ ಸೊಂಟಕ್ಕೆ ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದು, ಪತ್ನಿ ಮತ್ತು ಶಿವರಾಮ್ ರವರು ಹಲ್ಲೆಯನ್ನು ತಡೆಯಲು ಬಂದಾಗ ಮುನ್ನ ಯಾನೆ ಸುದರ್ಶನ್ ಅವಾಚ್ಯ ಶಬ್ದಗಳಿಂದ ಬೈದು ಈ ಬಾರಿ ಬದುಕಿದ್ದೀಯಾ ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದು, ಪತ್ತೆಗೆ ಬಲೆ ಬೀಸಿದ್ದಾರೆ.

























