ಪುತ್ತೂರು: ಹಳೆಯ ನೆನಪುಗಳೆಂದರೆ ಹಾಗೆ ನಮ್ಮನ್ನು ಒಮ್ಮೆಲೆ ಯಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ. ನಾವು ಕಲಿತ ಶಾಲೆ, ನಾವು ಕುಳಿತ ತರಗತಿ ಇವುಗಳನ್ನು ಕಂಡಾಗ ನಮ್ಮ ಕಣ್ಣುಗಳು ಒದ್ದೆಯಾಗುವುದು ಸಹಜ ಇದಕ್ಕೆ ಕಾರಣ ನಮ್ಮ ಮಕ್ಕಳಾಟ ಮತ್ತೆ ನೆನಪಾಗುತ್ತದೆ. ಪುತ್ತೂರಿನ ಕೊಂಬೆಟ್ಟು ಬೋರ್ಡು ಹೈಸ್ಕೂಲ್ ಗೆ ಜೂ.28 ರಂದು ಭೇಟಿ ನೀಡಿದ ಶಾಸಕ ಅಶೋಕ್ ರೈ ಗೆ ಆಗಿದ್ದು ಇದೇ ಸ್ಥಿತಿ.

ಇಂದು ಕಾರ್ಯಕ್ರಮದ ನಿಮಿತ್ತ ಶಾಲೆಗೆ ಭೇಟಿ ನೀಡಿದ ಅವರು ಕಾರ್ಯಕ್ರಮಕ್ಕೆ ಮೊದಲು ತಾನು ಕುಳಿತ ಎರಡು ತರಗತಿ ಕೋಣೆಗೆ ಭೇಟಿ ನೀಡಿದ್ದಾರೆ. ಅಲ್ಲಿ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದರು. ಅದನ್ನು ಕಂಡ ಶಾಸಕರು ನಾನು ಇದೇ ತರಗತಿಯ ಎರಡನೇ ಸಾಲಿನ ಬೆಂಚಿನಲ್ಲಿ ಕುಳಿತು ಪಾಠ ಕೇಳಿದ್ದೆ ಎಂದು ಒಂದು ಕ್ಷಣ ಭಾವುಕರಾಗಿ ತನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಘಟನೆ ನಡೆಯಿತು.

ಶಾಸಕರು ಪ್ರೌಢ ಶಿಕ್ಷಣವನ್ನು ಕೊಂಬೆಟ್ಟು ಶಾಲೆಯಲ್ಲಿ ಪೂರೈಸಿದ್ದರು.

























