ಪುತ್ತೂರು : ತೆಂಕಿಲ ಕಟ್ಟತ್ತಾರು ಬಳಿಯ ಗುಡ್ಡದಲ್ಲಿ ಬಕ್ರೀದ್ ದಿನದಂದು ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದ ಗಂಡು ಕರುವನ್ನು ಪೊಲೀಸರಿಗೆ ಮಾಹಿತಿ ನೀಡಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಹಾಗೂ ಸ್ಥಳೀಯ ಹಿಂದೂ ಯುವಕರು ಅಂತಿಮ ಸಂಸ್ಕಾರ ನೆರವೇರಿಸಿದರು.

ಅಕ್ರಮ ಗೋ ಸಾಗಾಟದ ವೇಳೆ ಜಾನುವಾರು ಸಾವನ್ನಪ್ಪಿರಬಹುದು ಎನ್ನಲಾಗುತ್ತಿದೆ.
ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುವಂತೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಆಗ್ರಹಿಸಿದೆ.


























