ಪುತ್ತೂರು : ಅರುಣ್ ಕುಮಾರ್ ಪುತ್ತಿಲ ಅವರ ನಿರ್ಧಾರಗಳು ಹಿಂದೂ ಸಮಾಜಕ್ಕೆ ಪೂರಕವಾಗಿದ್ದು, ಅವರಿಗೆ ಬೆಂಬಲ ನೀಡುವ ನಿರ್ಧಾರ ಎಂದೂ ಕೂಡ ಅಚಲವಾಗಿರಲಿದೆ ಎಂದು ಡಾ. ಸುರೇಶ್ ಪುತ್ತೂರಾಯ ಹೇಳಿದ್ದಾರೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ಗೌರವಾಧ್ಯಕ್ಷ ಅರುಣ್ ಕುಮಾರ್ ಎಲ್ಲರ ಆಶಯದಂತೆ ಸ್ಪರ್ಧಿಸಿದ್ದರು. ಸ್ವಲ್ಪದರಲ್ಲಿ ಸೋಲಾಗಿದೆ. ಈಗ ಅವರು ಹಿಂದುತ್ವದ ಏಕ ಮೇವ ನಾಯಕರಾಗಿ ಪುತ್ತೂರು ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿದ್ದಾರೆ. ಅವರ ನಾಯಕತ್ವ ಹಿಂದೂ ಸಮಾಜಕ್ಕೆ ಆವಶ್ಯಕ ಎಂಬುದು ಎಲ್ಲರಿಗೆ ಅರಿವಾಗಿದೆ.
ಕೇವಲ ಚುನಾವಣೆಯ ಸಮಯದಲ್ಲಿ ಹಿಂದುತ್ವದ
ನಾಯಕರಾಗಿರದೆ ಸದಾ ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿರುವ ಅರುಣ್ ಕುಮಾರ್ ಪುತ್ತಿಲ ರವರ ನಾಯಕತ್ವ ಹಿಂದು ಸಮಾಜಕ್ಕೆ ಆವಶ್ಯಕವಾಗಿರುವುದನ್ನು ಜನ ಮನಗಂಡಿದ್ದಾರೆ. ಅವರ ನಿರ್ಧಾರಗಳು ವೈಯಕ್ತಿಕವಾಗಿರದೆ ಹಿಂದೂ ಸಮಾಜಕ್ಕೆ
ಪೂರಕವಾಗಿದೆ. ಹೀಗಾಗಿ ಪುತ್ತಿಲ ಪರಿವಾರ ಕೈಗೊಳ್ಳುವ ಎಲ್ಲಾ ನಿರ್ಧಾರಗಳಿಗೆ ನಮ್ಮ ಬೆಂಬಲ, ಸಹಕಾರವಿದೆ.
ಪುತ್ತಿಲ ಪರಿವಾರಕ್ಕೆ ಬೆಂಬಲ ಅಚಲ ಎಂದು ಅವರು ಹೇಳಿದರು.


























