ವಿಟ್ಲ : ಕಾಂಪೌಂಡ್ ತಡೆಗೋಡೆ ಮನೆಯ ಮೇಲೆ ಬಿದ್ದು ಅಪಾರ ನಷ್ಟ ಸಂಭವಿಸಿರುವ ಘಟನೆ ವಿಟ್ಲ ಸಮೀಪದ ಚಂದಳಿಕೆಯಲ್ಲಿ ನಡೆದಿದೆ.

ಚಂದಳಿಕೆ ನಿವಾಸಿ ಕೃಷ್ಣಪ್ಪ ಮಡಿವಾಳ ರವರ ಮನೆಗೆ ಕಾಂಪೌಂಡ್ ತಡೆಗೋಡೆ ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಕೃಷ್ಣಪ್ಪ ರವರ ಮನೆಯ ಸಮೀಪ ಸ್ಥಳೀಯ ವ್ಯಕ್ತಿಯೋರ್ವರ ಹಾರ್ಡ್ ವೇರ್ & ಫರ್ನಿಚರ್ ಮಳಿಗೆ ಇದ್ದು, ಅವರು ಭಾರೀ ಮಟ್ಟದ ಎಂ ಸ್ಯಾಂಡ್ ಅನ್ನು ತಡೆಗೋಡೆಗೆ ಒತ್ತಿ ಶೇಖರಣೆ ಮಾಡಿದ್ದು, ನಿನ್ನೆ ಸುರಿದ ಭಾರೀ ಮಳೆಗೆ ಎಂ ಸ್ಯಾಂಡ್ ನಲ್ಲಿ ನೀರು ತುಂಬಿ ಅದರ ಭಾರದಿಂದ ರಾತ್ರಿ ವೇಳೆ ಮನೆ ಮೇಲೆ ಕಾಂಪೌಂಡ್ ತಡೆಗೋಡೆ ಬಿದ್ದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಸ್ಥಳಕ್ಕೆ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅಶ್ರಫ್ ವಿ.ಕೆ. ಹಾಗೂ ಪಟ್ಟಣ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.





























