ಉಪ್ಪಿನಂಗಡಿ : ಕರಾವಳಿಯಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು, ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ ಹಾಗೆಯೇ ರೆಡ್ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ. ತಮ್ಮ ರಜೆಯನ್ನು ವಿದ್ಯಾರ್ಥಿಗಳ ತಂಡವೊಂದು ವಿಶೇಷ ರೀತಿಯಲ್ಲಿ ಕಳೆದಿದೆ.

ಹೌದು.., ಉಪ್ಪಿನಂಗಡಿಯ 34ನೇ ನೆಕ್ಕಿಲಾಡಿ,ಕೋಡಿಂಬಾಡಿಯ ತ್ರಿವೇಣಿ ಸಂಗಮ ಶಾಂತಿನಗರದಲ್ಲಿ ವಿದ್ಯಾರ್ಥಿಗಳ ತಂಡವೊಂದು ತಾತ್ಕಾಲಿಕ ತಂಗುದಾಣವೊಂದನ್ನು ನಿರ್ಮಾಣ ಮಾಡಿದ್ದಾರೆ.
ಮಳೆಗಾಲದಲ್ಲಿ ಆಟೋ ರಿಕ್ಷಾದವರಿಗೆ, ಪ್ರಯಾಣಿಕರಿಗೆ ಸಹಕಾರಿಯಾಗುವ ಹಿನ್ನೆಲೆ ಈ ತಂಗುದಾಣವನ್ನು ನಿರ್ಮಾಣ ಮಾಡಿದ್ದಾರೆ.
ಜೀತೇಶ್, ಅಶ್ರಫ್, ಶಿವಕುಮಾರ್, ಪವಿತ್, ಕೀರ್ತನ್ ,ಯಜ್ನೇಶ್ ಹಾಗೂ ಈ ಮಕ್ಕಳ ಕಾರ್ಯಕ್ಕೆ ಸಿದ್ಧಿಕ್,ಹರ್ಷ, ತನಿಯಪ್ಪ ಸಾಥ್ ನೀಡಿದರು.
ಮಳೆಗಾಲದ ರಜೆಯನ್ನು ಸದುಪಯೋಗ ಪಡಿಸಿಕೊಂಡು ತಂಗುದಾಣ ನಿರ್ಮಾಣ ಮಾಡಿದ ಮಕ್ಕಳ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
























