ಪುತ್ತೂರು : ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿಗಳಿಂದ ಆರಂಭಿಸಲ್ಪಟ್ಟ ಶ್ರೀ ಗಣೇಶೋತ್ಸವಕ್ಕೆ ಈ ಬಾರಿ 41 ವರ್ಷದ ಸಂಭ್ರಮವಾಗಿದ್ದು, ದರ್ಬೆ ವಿನಾಯಕ ನಗರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವಿಜೃಂಭಣೆಯ ಗಣೇಶೋತ್ಸವಕ್ಕೆ ಜು.6 ರಂದು ವಿಗ್ರಹ ಮುಹೂರ್ತ ನಡೆಯಿತು.

ತಾರಾನಾಥ ಆಚಾರ್ಯ ರವರ ಏಕದಂತ ಆರ್ಟ್ಸ್ ಪರ್ಲಡ್ಕದಲ್ಲಿ ವಿಗ್ರಹ ಮುಹೂರ್ತ ಕಾರ್ಯಕ್ರಮ ನಡೆಯಿತು.

ಈ ವೇಳೆ ಹಳೆ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.

























