ಪುತ್ತೂರು : ಭಾರೀ ಮಳೆಗೆ ಹಲವಾರು ಕಡೆಗಳಲ್ಲಿ ಅನಾಹುತಗಳು ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಅರುಣ್ ಕುಮಾರ್ ರವರು ಭೇಟಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದರು.
ಕುರಿಯ ವಿಷ್ಣುನಗರ ವಿಶ್ವನಾಥ ಶೆಟ್ಟಿಯವರ ಮನೆಯ ಬದಿಯ ಕಂಪೌಂಡ್ ಕುಸಿದು ವಿಶ್ವನಾಥ ಶೆಟ್ಟಿಯವರ ಮನೆಯ ಒಂದು ಪಾಶ್ವ ಮುರಿದು ಅಪಾರ ನಷ್ಟವುಂಟಾಗಿದೆ.


ವಿಟ್ಲದ ಕೇಪು ನೀರ್ಕಾಜೆ ಜನತಾ ಕಾಲೋನಿಯ ಬಾಲಕೃಷ್ಣ ಪೂಜಾರಿವರ ಹಾಗೂ ಮತ್ತೊಂದು ಮನೆಗೆ ಧರೆ ಕುಸಿದು ಅಪಾರ ನಷ್ಟವುಂಟಾಗಿದೆ.

ಸುಳ್ಯಪದವಿನ ಕನ್ನಡ್ಕ ಕಜೆಮೂಲೆ ರಾಘವ ಗೌಡರ ಮನೆಯ ಹಿಂಬದಿ ಧರೆ ಕುಸಿದು ಹೊಸ ಮನೆಗೆ ಸಂಪೂರ್ಣ ಹಾನಿಯಾಗಿದೆ. ಅಂದಾಜು 5 ಲಕ್ಷದಷ್ಟು ನಷ್ಟವಾಗಿದೆ. ಸ್ಥಳಗಳಿಗೆ ತೆರಳಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ ಪುತ್ತಿಲ ರವರು ಶೀಘ್ರ ಕ್ರಮಕ್ಕೆ ಆಗ್ರಹಿಸಿದರು.





























