ಬೆಂಗಳೂರು : ಅನಿಲ್ ಕುಮಾರ್ ಶೆಟ್ಟಿ ಮತ್ತು ನೈಲಾಡಿ ಪ್ರಕಾಶ್ ಶೆಟ್ಟಿ ಸಂಯೋಜನೆಯಲ್ಲಿ ವಸಂತ ಗಿಳಿಯಾ ರವರ ಸಹಕಾರದಲ್ಲಿ ಶ್ರೀ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪೌರಾಣಿಕ ಯಕ್ಷ ವೈಭವ ಜರುಗಿತು.

ಈ ಸಂದರ್ಭ ಆಯೋಜಕರು ಅರುಣ್ ಕುಮಾರ್ ಪುತ್ತಿಲ ರವರಿಗೆ ಬೆಳ್ಳಿಯ ಗಧೆ ನೀಡಿ ಸನ್ಮಾನಿಸಿದರು.

ಬೆಂಗಳೂರಿನ ಅಭಿಮಾನಿಗಳು “ದಕ್ಷಿಣದ ನೇತಾರ” ಎಂಬ ನಾಮಾಂಕಿತ ಭಾವಚಿತ್ರ ನೀಡಿ ಸನ್ಮಾನಿಸಿದರು.

ಹಲವರ ಆರೋಗ್ಯಕ್ಕಾಗಿ ಶ್ರಮಿಸಿದ ಯುವ ನಾಯಕ ಅಶ್ವಿತ್ ಶೆಟ್ಟಿ ಕೊಡ್ಲಾಡಿ ಮತ್ತು ಕಾಂತಾರ ಸಿನಿಮಾದಲ್ಲಿ ಲೀಲಾ ತಂದೆಯಾಗಿ ಅಭಿನಯಿಸಿದ ಪೆರ್ಡೂರಿನ ಸತೀಶ್ ಆಚಾರ್ಯರನ್ನು ಸನ್ಮಾನಿಸಲಾಯಿತು.
























