ಪುತ್ತೂರು : ಬೆಳಗಾವಿ ಚಿಕ್ಕೋಡಿಯ ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಯನ್ನು ಪುತ್ತೂರು ನಗರ ಸಭೆ ನಿಕಟ ಪೂರ್ವ ಅಧ್ಯಕ್ಷರಾದ ಜೀವಂಧರ್ ಜೈನ್ ಖಂಡಿಸಿದ್ದಾರೆ.
ಭಾರತದ ಸಂತ ಪರಂಪರೆಗೆ ಬಹು ದೊಡ್ಡ ಕೊಡುಗೆ ನೀಡಿದ ಜೈನ ಮುನಿಗಳ ಮೇಲೆ ಇಂತಹ ಅಮಾನುಷವಾಗಿ ಹತ್ಯೆಗೈದಿರುವುದು ಒಂದು ಜೀವಿಗೂ ನೋವಾಗದಂತೆ ಸಮಾಜದಲ್ಲಿ ಬದುಕುವ ಜೈನ ಸಮುದಾಯಕ್ಕೆ ತುಂಬಾ ನೋವಾಗಿದೆ.
ತಪ್ಪಿತಸ್ಥರಿಗೆ ಮರಣ ದಂಡನೆಯಂತ ಉಗ್ರ ಶಿಕ್ಷೆ ನೀಡಬೇಕು ಹಾಗೂ ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ಕೊಡಬೇಕೆಂದು ಆಗ್ರಹಿಸಿದ್ದಾರೆ.


























