ಪುತ್ತೂರು : ಆರ್ಯಾಪು ಗ್ರಾಮ ಪಂಚಾಯತ್ ನ ಉಪಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜಗದೀಶ್ ಭಂಡಾರಿ ಹಾಗೂ ವಸಂತ ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ನಾಮಪತ್ರ ಸಲ್ಲಿಸಿದರು.

ಆರ್ಯಾಪು ಗ್ರಾಮ ಪಂಚಾಯತಿಯ ಆರ್ಯಾಪು ಎರಡನೇ ವಾರ್ಡ್‌ನ (ಆರ್ಯಾಪು 11) ಸದಸ್ಯರಾಗಿದ್ದ ನಿವೃತ್ತ ಎಸ್ಐ ರುಕ್ಮಯ್ಯ ಮೂಲ್ಯ ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನ ಹೊಂದಿದ್ದು, ಈ ಹಿನ್ನೆಲೆ ಉಪಚುನಾವಣೆ ನಡೆಯಲಿದೆ.





























