ಕುಂಡಡ್ಕ : ಸವಣೂರು-ಬೆಳ್ಳಾರೆ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯ ಕುಂಡಡ್ಕದಲ್ಲಿ ಬುಧವಾರ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದಿದ್ದು, ಪೂರ್ಣ ಪ್ರಮಾಣದ ತೆರವು ಕಾರ್ಯಾಚರಣೆ ಗುರುವಾರ ನಡೆಯಿತು.

ಪದ್ಮನಾಭ ಬೂಡು ಅವರ ಮಾಲಕತ್ವದ ಜೆಸಿಬಿ ಯಂತ್ರದ ಮೂಲಕ ತೆರವು ಕಾರ್ಯಾಚರಣೆ ನಡೆಯಿತು.
ತುರ್ತು ನೆರವು
ಬುಧವಾರ ಸಂಜೆ ಮರ ಉರುಳಿ ಬಿದ್ದು ಸಂಚಾರ ಸ್ಥಗಿತಗೊಂಡ ಸಂದರ್ಭದಲ್ಲಿ ವಾಹನ ಸಂಚಾರಕ್ಕಾಗಿ ತುರ್ತು ಸಂಪರ್ಕ ಕಲ್ಪಿಸುವಲ್ಲಿ ಲೈನ್ ಮೆನ್ ಮಹಾಂತೇಶ್, ವಿಪತ್ತು ಪರಿಹಾರ ತಂಡದ ರಮೇಶ ಮಠತ್ತಡ್ಕ, ನೇಸರ ಯುವಕ ಮಂಡಲದ ಜಯಂತ ಕುಂಡಡ್ಕ, ಚಂದ್ರಶೇಖರ, ಗ್ರಾ.ಪಂ. ಸದಸ್ಯ ಪದ್ಮನಾಭ ಶೆಟ್ಟಿ ಪೆರುವಾಜೆ, ಗಣೇಶ ಕುಂಡಡ್ಕ, ಪಿಡಿಓ ಜಯಪ್ರಕಾಶ್, ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮೊದಲಾದವರು ನೆರವಾದರು.


























