ವಿಟ್ಲ : ಮಳೆಗಾಲ ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ನೀರಿನ ಸಮಸ್ಯೆ ಬಗೆಹರಿಯದ ಬಗ್ಗೆ ವಿಟ್ಲ ಪಟ್ಟಣ ಪಂಚಾಯತ್ ನಾಲ್ಕನೇ ವಾರ್ಡ್ ಸದಸ್ಯರಾದ ರಕ್ಷಿತಾ ಸನತ್ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳಿಗೆ ಹಾಗೂ ಅವರ ಮೂಲಕ ಶಾಸಕ ಅಶೋಕ್ ರೈ, ಬಂಟ್ವಾಳ ತಹಶೀಲ್ದಾರ್ ರಿಗೆ ಮನವಿ ಸಲ್ಲಿಸಿದ್ದಾರೆ.

ಚಂದಳಿಕೆ ಕುರಂಬಳ ರಸ್ತೆಯ ಭಾಗದ ನಿವಾಸಿಗಳಿಗೆ ಹಾಗೂ ಚಂದಳಿಕ ಶಾಲೆಗೆ ಮತ್ತು ಅಂಗನವಾಡಿ ಕೇಂದ್ರಕ್ಕೆ ಕಳೆದ ಜನವರಿಯಿಂದ ನೀರಿನ ಸಮಸ್ಯೆ ಇರುತ್ತದೆ. ಪ್ರಸ್ತುತ ಈ ಭಾಗಕ್ಕೆ ಸುಮಾರು 1.5 ಕಿಲೋಮೀಟರ್ ಕುರುಂಬಳದಿಂದ ಬೋರ್ವೆಲ್ ನಿಂದ ನೀರು ಪೂರೈಕೆ ಆಗುತ್ತಿತ್ತು. ಇತ್ತೀಚಿಗೆ ಬೋರ್‌ವೆಲ್ ನಲ್ಲಿ ನೀರಿಲ್ಲದ ಕಾರಣ ಮತ್ತು ನೀರಿನ ಪ್ರಶರ್ ಇಲ್ಲದ ಕಾರಣ ಚಂದಳಿಕೆ ಭಾಗಕ್ಕೆ ನೀರು ಬರುತ್ತಿಲ್ಲ., ಹಾಗಾಗಿ ಕಳೆದ ಮಾರ್ಚ್ ತಿಂಗಳಲ್ಲಿ ಚಂದಳಿಕೆ ಶಾಲೆಯ ಬಳಿ ಹೊಸ ಬೋರ್ವೆಲ್ (760feet) ಕೊರೆದಿರುತ್ತಾರೆ.
ಆ ಬೇಸಿಗೆ ಸಮಯದಲ್ಲಿ 550 feet ನ ನಂತರ ಒಂದುವರೆ ಇಂಚು ನೀರು ಸಿಕ್ಕಿರುತ್ತದೆ. ಆದರೆ ಈವರೆಗೆ ಈ ಬೋರ್ವೆಲ್ ಗೆ ಪಂಪ್ ಹಾಗೂ ವಿದ್ಯುತ್ ಕಲೆಕ್ಷನ್ ಮತ್ತು ನೀರಿನ ಪೈಪ್ ಲೈನ್ ವ್ಯವಸ್ಥೆ ಆಗದೆ ಇರುವುದರಿಂದ ಆ ಭಾಗದ ಜನರು ಮತ್ತು ಶಾಲೆಯ ಮಕ್ಕಳು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಈ ಸಮಸ್ಯೆಯನ್ನು ಸುಮಾರು ಬಾರಿ ವಿಟ್ಲ ಪಟ್ಟಣ ಪಂಚಾಯತ್ ನ ಇಂಜಿನಿಯರ್ ಅವರ ಗಮನಕ್ಕೆ ತಂದಿರುತ್ತೇನೆ. ಇದಕ್ಕೆ ಜಾಸ್ತಿ, ಕೆಪ್ಯಾಸಿಟಿ ಬೋರ್ವೆಲ್ ಪಂಪ್ ಬೇಕಾಗಿರುತ್ತದೆ ಎಂದು ಪಟ್ಟಣ ಪಂಚಾಯತಿಯ ಇಂಜಿನಿಯರ್ ಹೇಳಿರುತ್ತಾರೆ ಆದರೆ ಇವತ್ತಿನವರೆಗೂ ನೀರಿನ ಸಮಸ್ಯೆ ಬಗೆಹರಿಯಲಿಲ್ಲ. ಆದ್ದರಿಂದ ತಕ್ಷಣ ಆ ಬೋರ್ವೆಲ್ ಗೆ ಜಾಸ್ತಿ ಕೆಪ್ಯಾಸಿಟಿಯ ಪಂಪ್ ಮತ್ತು ಪೈಪ್ ಲೈನ್ ಹಾಗೂ ವಿದ್ಯುತ್ ವ್ಯವಸ್ಥೆಯನ್ನು ಮಾಡಿ ತಕ್ಷಣವೇ ಆ ಭಾಗದ ಜನರಿಗೆ ಮತ್ತು ಶಾಲೆಗೆ ನೀರನ್ನು ಪೂರೈಸಬೇಕಾಗಿ ಮನವಿಯಲ್ಲಿ ತಿಳಿಸಿದ್ದಾರೆ.

























