ಬಂಟ್ವಾಳ : ಸಾಲ ಮರುಪಾವತಿ ಮಾಡಿ ತಪ್ಪಿದ್ದಲ್ಲಿ ಏಲಂಗೆ ಮುಂದಾಗುವ ಬಗ್ಗೆ ಬ್ಯಾಂಕ್ ನೋಟಿಸ್ ನೀಡಲು ಮುಂದಾಗಿದೆ ಎಂದು ಸುದ್ದಿ ತಿಳಿದ ರೈತನೋರ್ವ ಮಾಡದ ತಪ್ಪಿಗೆ ಮನನೊಂದು ಆತ್ಮಹತ್ಯೆ ಗೆ ಯತ್ನಿಸಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಕಾವಳಮೂಡೂರು ಪಂಜಾಡಿ ನಿವಾಸಿ ಗುರುಪ್ರಸಾದ್ ಅವರು ಆತ್ಮ ಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ದೀಪಾ ಪ್ರಭು ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯರಾಗಿರುವ ಗುರುಪ್ರಸಾದ್ ಹೆಸರಿನಲ್ಲಿ ಅವರಿಗೆ ತಿಳಿಯದಂತೆ ಪ್ರಭಾವಿಗಳು ಪೋರ್ಜರಿಯಾಗಿ ಲೋನ್ ಪಡೆದು ಈಗ ಏಲಂ ನೊಟೀಸ್ ನೀಡಿದ್ದಾರೆ ಎಂದು ತಿಳಿದ ಅವರು ನೊಂದು ಆತ್ಮಹತ್ಯೆಗೆ ಪ್ರಯತ್ನಿಸಿ ಕೆ.ಎಂ.ಸಿ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಸ್ವತಃ ಗುರುಪ್ರಸಾದ್ ಒಂದು ವಿಡಿಯೋ ಕೂಡ ಮಾಡಿದ್ದು, ಅದರಲ್ಲಿ ನಾನು ಯಾವುದೇ ಸಾಲ ಮಾಡಿಲ್ಲ.ಆದರೆ ನನ್ನ ಹೆಸರನ್ನು ಬಳಸಿಕೊಂಡು ಕೆಲವರು ಹೆಸರನ್ನು ಉಲ್ಲೇಖಮಾಡಿದ್ದು, ಅವರು ಸಾಲ ಮಾಡಿದ್ದಾರೆ , ಆದರೆ ಪ್ರಸ್ತುತ ಅವರನ್ನು ಸಾಲಕಟ್ಟದೆ ನನಗೆ ತೊಂದರೆಯಾಗಿದೆ. ಲಕ್ಷಾಂತರ ರೂ ಸಾಲವನ್ನು ಬಡ ರೈತನಾಗಿರುವ ನನ್ನಿಂದ ಕಟ್ಟಲು ಸಾಧ್ಯವಿಲ್ಲ. ನಾನು ಏನು ಮಾಡದ ಸ್ಥಿತಿಯಲ್ಲಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಆಸ್ಪತ್ರೆಗೆ ಸಂಸದ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭೇಟಿ ನೀಡಿದ್ದು, ಗುರುಪ್ರಸಾದ್ ಮನೆಯವರ ಜೊತೆ ಮಾತುಕತೆ ನಡೆಸಿ, ಅವರಿಗೆ ಧೈರ್ಯ ತುಂಬಿದರು. ಹಾಗೆಯೇ ಈ ಬಗ್ಗೆ ಶೀಘ್ರ ತನಿಖೆ ನಡೆಸುವ ಬಗ್ಗೆ ಭರವಸೆ ನೀಡಿದರು.

























