ಪುತ್ತೂರು : ಪುತ್ತಿಲ ಪರಿವಾರದಿಂದ ನಿಡ್ಪಳ್ಳಿ ಹಾಗೂ ಆರ್ಯಾಪು ಗ್ರಾಮ ಪಂಚಾಯತ್ ನ ಉಪಚುನಾವಣೆಗೆ ಮಹಾ ಸಂಪರ್ಕ ಅಭಿಯಾನ ಇಂದು ನಡೆಯಿತು.

ಶ್ರೀಕ್ಷೇತ್ರ ನಿಡ್ಪಳ್ಳಿಯ ಶಾಂತಾದುರ್ಗಾ ದೇವಸ್ಥಾನ, ಆರ್ಯಾಪು ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಎರಡು ಕ್ಷೇತ್ರದ ಪುತ್ತಿಲ ಪರಿವಾರದ ಬ್ಯಾಟ್ ಚಿಹ್ನೆಯ ಅಭ್ಯರ್ಥಿಗಳಾದ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಡ ಹಾಗೂ ಜಗನ್ನಾಥ ರೈ ಕೊಳಂಬೆತ್ತಿಮಾರು ಹಾಗೂ ಹಿಂದೂ
ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ
ತಾಲೂಕು ಸಮಿತಿ ಹಾಗೂ ಎರಡು ಕ್ಷೇತ್ರಗಳ ಸಮಿತಿಯ
ಪ್ರಮುಖರು ಹಾಗೂ ಕಾರ್ಯಕರ್ತರು ಮಹಾ
ಸಂಪರ್ಕ ಅಭಿಯಾನದಲ್ಲಿ ಭಾಗವಹಿಸಿದರು.




























