ಪುತ್ತೂರು : ಚಿಕ್ಕೋಡಿ ಜೈನ ಮುನಿ ಭೀಕರ ಹತ್ಯೆ ಮಾಡಿದ ಆರೋಪಿಗಳ ಮನೆ ಸಹಿತ ಸಂಪೂರ್ಣ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಾಗಿ ಪುತ್ತಿಲ ಪರಿವಾರದ ವತಿಯಿಂದ ಸಹಾಯಕ ಕಮಿಷನರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪ್ರಕರಣಕ್ಕೆ ಸಂಬಂಧಿತ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಬಿರಿಯಾನಿ ಊಟ ನೀಡುವಂತಹ ಸ್ಥಿತಿ ನಿರ್ಮಾಣವಾಗಬಾರದು. ಧಾರ್ಮಿಕ ಪರಂಪರೆಯನ್ನು ಉಳಿಸುವಲ್ಲಿಯೂ ಕಾರ್ಯ ಸರ್ಕಾರ ಕಟಿ ಬದ್ದವಾಗಿರಬೇಕು ಎಂದು ಮನವಿಯಲ್ಲಿ ತಿಳಿಸಿದರು.

ಮನವಿ ಸಲ್ಲಿಸುವ ಸಂದರ್ಭ ಪುತ್ತಿಲ ಪರಿವಾರದ ಪ್ರಮುಖರಾದ ಉಮೇಶ್ ಗೌಡ , ಪ್ರವೀಣ್ ಭಂಡಾರಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.























