ವಿಟ್ಲ : ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ, ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ, ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ ರವರ ತಂದೆ ಎಂ. ನಾರಾಯಣ (ಬಟ್ಟು ಸ್ವಾಮಿ) (70) ರವರು ಜು.17 ರಂದು ಅನಾರೋಗ್ಯದಿಂದಾಗಿ ನಿಧನರಾದರು.

ಎಂ ನಾರಾಯಣ ರವರು ಗುರುಸ್ವಾಮಿಯಾಗಿದ್ದು, ವಿಟ್ಲ ಅಯ್ಯಪ್ಪ ದೇವಸ್ಥಾನದ ಮುಖ್ಯಸ್ಥರಾಗಿದ್ದರು.

ನೂರಾರು ಅಯ್ಯಪ್ಪ ಭಕ್ತರಿಗೆ ಮಾರ್ಗದರ್ಶನ ನೀಡಿದ್ದರು.
ಮೃತರು ಮೂವರು ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

























