ಬೆಂಗಳೂರು: ವಿಧಾನಸಭೆಯಲ್ಲಿ ಬುಧವಾರ 10 ಬಿಜೆಪಿ ಶಾಸಕರ ಅಮಾನತಾದ ಬಳಿಕ, ಆವರಣದಲ್ಲಿ ನೂಕಾಟ ತಳ್ಳಾಟ ಏರ್ಪಟ್ಟು ಈ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ನಡೆದ ಗದ್ದಲ, ಗಲಾಟೆಯ ಹಿನ್ನೆಲೆ ಸ್ಪೀಕರ್ ಯು.ಟಿ ಖಾದರ್ ಅವರು ಬಿಜೆಪಿ ಶಾಸಕರನ್ನ ಅಮಾನತು ಮಾಡಿದ್ದರು. ಇದಾದ ಬಳಿಕ ಸ್ಪೀಕರ್ ಕಚೇರಿಯಿಂದ ಬಿಜೆಪಿ ಶಾಸಕರನ್ನ ಮಾರ್ಷಲ್‌ಗಳು ತೆರವುಗೊಳಿಸಲು ಮುಂದಾಗಿದ್ದಾರೆ. ಕೆಂಗಲ್ ಗೇಟ್ ಮೂಲಕ ಬಿಜೆಪಿ ಶಾಸಕರನ್ನು ಮಾರ್ಷಲ್‌ಗಳು ಹೊರ ಹಾಕಿದ್ದಾರೆ.
ಈ ವೇಳೆ ಸ್ಪೀಕರ್ ಗೇಟ್ ಬಳಿ ನೂಕಾಟ, ತಳ್ಳಾಟ ನಡೆದಿದೆ. ನೂಕಾಟ, ತಳ್ಳಾಟದ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕುಸಿದು ಬಿದ್ದಿದ್ದಾರೆ. ಅಸ್ವಸ್ಥರಾದಂತೆ ಕಂಡು ಬಂದ ಯತ್ನಾಳ್‌ರನ್ನ ಮಾರ್ಷಲ್‌ಗಳು ಸ್ಟ್ರೆಚರ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ. ನಂತರ ಆ್ಯಂಬುಲೆನ್ಸ್ ನಲ್ಲಿ ಯತ್ನಾಳ್ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

























