ಪುತ್ತೂರು : ಅಕ್ರಮವಾಗಿ ಜಾನುವಾರ ಸಾಗಾಟ ಮಾಡುತ್ತಿದ್ದ ವೇಳೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಸವಣೂರು ಸಮೀಪದ ಕುದ್ಮಾರು ಎಂಬಲ್ಲಿ ನಡೆದಿದೆ.

ಕುದ್ಮಾರು ಎಂಬಲ್ಲಿ ಅಕ್ರಮವಾಗಿ ಯಾವುದೇ ದಾಖಲೆಗಳು ಇಲ್ಲದೇ ಎರಡು ಹಸುಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸರ ಮೂಲಕ ಅದನ್ನು ತಡೆದು ಜಾನುವಾರುಗಳನ್ನು ಬೆಳ್ಳಾರೆ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ.
ಜಾನುವಾರುಗಳನ್ನು ಕರೆದುಕೊಂಡು ಬಂದ ಪಿಕಪ್ ವಾಹನವು ಮುಡಿಪು ಕಡೆಯಿಂದ ಬಂದಿದೆನ್ನಲಾಗುತ್ತಿದೆ..
























