ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ಫೋಟಕ ವಿಚಾರಗಳು ಬಯಲಾಗುತ್ತಿದೆ.
ಈ ಮೂಲಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರ ನಜೀರ್ ನದ್ದೇ ಹವಾ ಎನ್ನುವಂತಾಗಿದೆ.
ಬಂಧಿತ ನಜೀರ್ ವಿಚಾರಣೆ ವೇಳೆ ಸ್ಫೋಟಕ ಸತ್ಯವೊಂದು ಬಹಿರಂಗವಾಗಿದೆ. ಜೈಲಲ್ಲಿದ್ದುಕೊಂಡೇ ಈತ 30ಕ್ಕೂ ಹೆಚ್ಚು ಹಿಂದೂಗಳ ಮತಾಂತರ ಮಾಡುತ್ತಿದ್ದನು. ಬಡ ಅಮಾಯಕ ಹಿಂದೂ ಹುಡುಗರನ್ನು ಈತ ಕನ್ವರ್ಟ್ ಮಾಡುತ್ತಿದ್ದ. ಮೀಸೆ ಬೋಳಿಸಿ, ಗಡ್ಡ ಬಿಟ್ಟುಕೊಂಡಿರುವ ವಿಚಾರಣಾಧೀನ ಕೈದಿಗಳು ಬಂದರೆ ಎಂಟ್ರಿ ಹಾಕಿಸಿಕೊಳ್ಳುತ್ತಿದ್ದ. ಅಲ್ಲದೆ ಉಗ್ರರಿಗೆ ನಿಗದಿಯಾಗಿರೋ ಹೈಸೆಕ್ಯುರಿಟಿ ಸೆಲ್‍ನಲ್ಲೇ ಇರಿಸಿಕೊಳ್ಳುತ್ತಿದ್ದ. ಇದಕ್ಕಾಗಿ 70,000 ದವರೆಗೆ ನಜೀರ್ ಹಣ ಚಾರ್ಜ್ ಮಾಡುತ್ತಿದ್ದ. ಆದರೆ ಜೈಲು ಸಿಬ್ಬಂದಿ ಮಾತ್ರ ನಜೀರ್ ನ ದುಷ್ಕೃತ್ಯವನ್ನು ಕಂಡೂ ಕಾಣದಂತಿದ್ದರು ಎಂಬ ಸಂಗತಿಯೊಂದು ವಿಚಾರಣೆ ವೇಳೆ ಹೊರಬಿದ್ದಿರುವ ಮಾಹಿತಿ ಲಭ್ಯವಾಗಿದೆ.
























