ಬೆಂಗಳೂರು : ಸರ್ಕಾರಿ ಪದವಿ ಪೂರ್ವ ಕಾಲೇಜು ನಾರ್ಶ ಮೈದಾನ ಅಧ್ಯಯನ ಪ್ರವಾಸದ ನೆಲೆಯೊಳಗೆ 45 ವಿದ್ಯಾರ್ಥಿಗಳು ಹಾಗೂ ಪ್ರಾಂಶುಪಾಲ ರೀಟಾ ಡಿಸೋಜ ಮತ್ತು ಉಪನ್ಯಾಸಕರು ಕರ್ನಾಟಕ ವಿಧಾನಸಭೆಯಲ್ಲಿ ನಡೆಯುವ ಸದನದಲ್ಲಿ ಭಾಗವಹಿಸಿದರು.

ಕರ್ನಾಟಕ ರಾಜ್ಯದ ಸಭಾಪತಿ ಯು ಟಿ ಖಾದರ್ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸಂಪೂರ್ಣ ಸಹಕಾರದೊಂದಿಗೆ ಕಾಲೇಜಿನ ಅಧ್ಯಯನ ಪ್ರವಾಸವು ಯಶಸ್ವಿಯಾಗಿ ಸಂಪನ್ನಗೊಂಡಿತು.

























