ವಿಟ್ಲ : ಮಟ್ಕಾ ಆಟ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದ ಘಟನೆ ವಿಟ್ಲ ಕೇಪು ಸಮೀಪದ ಕುದ್ದುಪದವು ಜಂಕ್ಷನ್ ನಲ್ಲಿ ನಡೆದಿದೆ.
ಜು.21 ರಂದು ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷರಾದ ಕಾರ್ತಿಕ್ ಕೆ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬಂದ ಮಾಹಿತಿ ಮೇರೆಗೆ ವಿಟ್ಲ ಕೇಪು ಸಮೀಪದ ಕುದ್ದುಪದವು ಜಂಕ್ಷನ್ ನಲ್ಲಿ ದಿನಸಿ ಅಂಗಡಿಯಲ್ಲಿ ಮಟ್ಕಾ ಆಟ ಆಡಿಸುತ್ತಿದ್ದ ಜನಾರ್ಧನ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಕೇಪು ಗ್ರಾಮದ ಕುದ್ದುಪದವು ಜಂಕ್ಷನ್ ಎಂಬಲ್ಲಿನ ಜನಾರ್ಧನ ಯಾನೆ ರವಿಕುಮಾರ್ ಎಂಬವರ ದಿನಸಿ ಅಂಗಡಿಯಲ್ಲಿ ಅದೃಷ್ಟದ ಮಟ್ಕಾ ಆಟ ಆಡುತ್ತಿದ್ದು, ಜನಾರ್ಧನ ಎಂಬಾತನೇ ಈ ಆಟವನ್ನು ಆಡಿಸುತ್ತಿರುವವನು ಆಗಿರುತ್ತಾನೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ ಮೇಲಾಧಿಕಾರಿಯವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿ ಬಂಟ್ವಾಳ ತಾಲೂಕು ಕೇಪು ಗ್ರಾಮದ ಕುದ್ದುಪದವು ಜಂಕ್ಷನ್ ಎಂಬಲ್ಲಿಗೆ ತಲುಪಿದಾಗ ಜನಾರ್ಧನ ರವರ ಅಂಗಡಿಯ ಜಗಳಿಯಲ್ಲಿ ಜನರು ಸುತ್ತುವರಿದು ನಿಂತುಕೊಂಡಿದ್ದು, ಅವರ ಒಬ್ಬಾತ ಚೀಟಿಯನ್ನು ಹಿಡಿದುಕೊಂಡು ಬರೆಯುತ್ತಿದ್ದ ವೇಳೆ ದಾಳಿ ನಡೆಸಿದಾಗ ಹಣ ಕಟ್ಟಲು ಸೇರಿದವರು ಪೊಲೀಸರನ್ನು ಕಂಡು ಓಡಿ ಹೋಗಿದ್ದು, ಚೀಟಿ ಬರೆಯುತ್ತಿದ್ದವನನ್ನು ವಿಚಾರಿಸಿದಾಗ ಅದೃಷ್ಟದ ಆಟವಾಗಿದ್ದು, ಆಟ ಆಡುವ ಜನರು ಜನಾರ್ಧನ ಬಳಿಗೆ ಬಂದು ಒಂದು ಸಂಖ್ಯೆಗೆ ಅವರ ಇಚ್ಚೆಯಷ್ಟು ಹಣವನ್ನು ಕಟ್ಟಿರುತ್ತಾರೆ ಎಂದು ತಿಳಿಸಿದ್ದು, ಜನಾರ್ಧನ ರನ್ನು ಪರಿಶೀಲಿಸಿದಾಗ ಆತನ ಬಳಿಯಲ್ಲಿ ಒಂದು ಪ್ಲಾಸ್ಟಿಕ್ ಲಕೋಟೆಯಲ್ಲಿ, ಚೀಟಿ, ಪೆನ್ ಹಾಗೂ ಹಣ ಇದ್ದು, ಸಂಗ್ರಹದ ಹಣವನ್ನು ರಂಜಿತ್ ಎಂಬವರಿಗೆ ನೀಡುತ್ತಿರುವುದಾಗಿ ತಿಳಿಸಿದ್ದು, ಕಾಗದಗಳು ಯಾವುದೇ ಬೆಲೆ ಬಾಳುವುದಿಲ್ಲ. ಅದೇ ಪ್ಲಾಸ್ಟಿಕ್ ಲಕೋಟೆಯಲ್ಲಿ 10 ರೂಪಾಯಿ ಮುಖ ಬೆಲೆಯ 34 ನೋಟುಗಳು, 20 ರೂಪಾಯಿ ಮುಖ ಬೆಲೆಯ 46 ನೋಟುಗಳು, 50 ರೂಪಾಯಿ ಮುಖ ಬೆಲೆಯ 7 ನೋಟುಗಳು, 100 ರೂಪಾಯಿ ಮುಖ ಬೆಲೆಯ 2 ನೋಟು, 500 ರೂಪಾಯಿ ಮುಖ ಬೆಲೆಯ 6 ನೋಟುಗಳು ಒಟ್ಟು ಹಣ 4,810/- ರೂಪಾಯಿ ಐ-ಟೆಲ್ ಕಂಪೆನಿಯ ಮೊಬೈಲ್ ಅದರ ಅಂದಾಜು ಮೌಲ್ಯ -1500/- ರೂಪಾಯಿ ಪೆನ್ ಅದರ ಅಂದಾಜು ಮೌಲ್ಯ 5/- ರೂಪಾಯಿ ಪ್ಲಾಸ್ಟಿಕ್ ಲಕೋಟೆಯು ಯಾವುದೇ ಬೆಲೆ ಬಾಳುವುದಿಲ್ಲ. ಈ ಬಗ್ಗೆ ವಿವರವಾದ ಮಹಜರು ಮುಖೇನಾ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಯಿತು.
ಆರೋಪಿಗಳಾದ ಜನಾರ್ಧನ (ರವಿಕುಮಾರ್) ಹಾಗೂ ರಂಜಿತ್ ಪ್ರಕರಣ ದಾಖಲಾಗಿದೆ.
























