ಪುತ್ತೂರು: ಬ್ಯಾಂಕ್ ಆಫ್ ಬರೋಡದ 116 ನೇ ಸ್ಥಾಪಕ ದಿನಾಚರಣೆ ಅಂಗವಾಗಿ ಬ್ಯಾಂಕಿನ ಕಮ್ಯುನಿಟಿ ಸರ್ವಿಸ್ ಆಶ್ರಯದಲ್ಲಿ ಅನಾಥಾಶ್ರಮಕ್ಕೆ ಬೇಕಾದ ವಸ್ತುಗಳನ್ನು ಜುಲೈ 20 ರಂದು ಕೊಡುಗೆಯಾಗಿ ನೀಡಲಾಯಿತು.

ಸುಮಾರು 40 ವರ್ಷದಿಂದ ಕಾರ್ಯಚರಿಸುತ್ತಿರುವ ಅನ್ಸಾರುದ್ದೀನ್ ಯತೀಂ ಖಾನಕ್ಕೆ ಜುಲೈ 20 ರಂದು ಭೇಟಿ ನೀಡಿದ ಬ್ಯಾಂಕ್ ಆಫ್ ಬರೋಡ ದರ್ಬೆ ಶಾಖೆಯ ಮುಖ್ಯ ವ್ಯವಸ್ಥಾಪಕರಾದ ಸಾಧಿಕ್ ಎಸ್.ಎಂ ಹಾಗೂ ಅಧಿಕಾರಿ ಶ್ರೀಕಾಂತ್ ರವರು ಬ್ಯಾಂಕಿನಿಂದ ಕೊಡ ಮಾಡಿದ ಫ್ಯಾನುಗಳು, ಗ್ಯಾಸ್ ಸ್ಟವ್ ಹಾಗೂ ಉಪಕರಣಗಳನ್ನು ಅನ್ಸಾರುದ್ದೀನ್ ಯತೀಂ ಖಾನದ ಉಪಾಧ್ಯಕ್ಷರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರವರಿಗೆ ಸಂಸ್ಥೆಯ ಕಚೇರಿಯಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಾಲ್ಮರ, ಉದ್ಯಮಿ ಯೂಸುಫ್ ಕಬೀರ್ ಸಾಲ್ಮರ, ನ್ಯಾಯವಾದಿ ಸಾತ್ವಿಕ್ ಆರಿಗ, ಸಂಸ್ಥೆಯ ವ್ಯವಸ್ಥಾಪಕರಾದ ಇಸ್ಮಾಯಿಲ್ ನೆಲ್ಯಾಡಿ ಉಪಸ್ಥಿತರಿದ್ದರು.
























