ಪುತ್ತೂರು : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ರವರು ಮನೆ ನಿರ್ಮಾಣ ಮಾಡಿದ ಮುಗ್ರೋಡಿ ಕನ್ಸ್ಟ್ರಕ್ಷನ್ ನ ಮಾಲಕರಾದ ಸುಧಾಕರ ಶೆಟ್ಟಿ ಮುಗ್ರೋಡಿ ರವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಪ್ರವೀಣ್ ನೆಟ್ಟಾರು ರವರ ಪತ್ನಿ ನೂತನಾ, ಬಿಜೆಪಿ ಪ್ರಮುಖರಾದ ಆರ್.ಕೆ ಭಟ್ ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ಯುವ ಮೋರ್ಚಾ ದ.ಕ ಜಿಲ್ಲಾ ಕಾರ್ಯಕಾರಿಣಿ ಸದಸ್ಯ,ಯುವವಾಹಿನಿ ಕೇಂದ್ರ ಸಮಿತಿ ಇದರ ಸಂಘಟನಾ ಕಾರ್ಯದರ್ಶಿ ಪ್ರವೀಣ್ ನೆಟ್ಟಾರು ಕನಸಿನ ಮನೆಯನ್ನು ಅವರ ಅಗಲುವಿಕೆ ನಂತರ ಬಿಜೆಪಿಯ ರಾಜ್ಯಾಧ್ಯಕ್ಷ, ಸಂಸದರಾದ ನಳಿನ್ ಕುಮಾರ್ ಕಟೀಲ್ ನೇತೃತ್ವ ವಹಿಸಿ ಸ್ವಂತ ಖರ್ಚಿನಲ್ಲಿ ಭರಿಸಿ,ಆ ಜವಾಬ್ದಾರಿಯನ್ನ ಮುಗ್ರೋಡಿ ಕನ್ಟ್ರಕ್ಷನ್ಸ್ ಕಾವೂರು ಇದರ ಮುಖ್ಯಸ್ಥರಾದ ಸುಧಾಕರ ಶೆಟ್ಟಿಯವರಿಗೆ ನೀಡಿದ್ದರು.
ಮುಗ್ರೋಡಿ ಕನ್ಟ್ರಕ್ಷನ್ಸ್ ರವರು ಅತ್ಯಂತ ಪಾರದರ್ಶಕವಾಗಿ, ಉತ್ತಮವಾಗಿ,ಗುಣಮಟ್ಟದಲ್ಲೂ ಯಾವುದೇ ರಾಜಿ ಮಾಡಿಕೊಳ್ಳದೆ ಕುಟುಂಬಸ್ಥರ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಮನೆಯನ್ನ ನಿರ್ಮಿಸಿಕೊಟ್ಟು ಹಸ್ತಾಂತರಿಸಿದ್ದಾರೆ.
ಸಂಸದರು ಕೊಟ್ಟಂತಹ ಜವಾಬ್ದಾರಿಯನ್ನ ಸಂಸದರ ಮಾರ್ಗದರ್ಶನದಲ್ಲಿ ಅತ್ಯಂತ ಯಶಸ್ವಿಯಾಗಿ ಮನೆಯವರಿಗೆ ಬೇಕಾಗುವ ರೀತಿಯಲ್ಲೇ ಮಾಡಿಕೊಟ್ಟ ಸುಧಾಕರ್ ರವರಿಗೆ ಅವರ ಕಚೇರಿಯಲ್ಲೇ ಗೌರವಾರ್ಪಣೆ ಸಲ್ಲಿಸಲಾಯಿತು.


























