ಮಾಣಿ : ಕಳೆದ ಎರಡು ಮೂರು ದಿನಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ವಾಹನ – ಜನರು ಓಡಾಡಲು ಬಹಳ ತ್ರಾಸದಾಯಕವಾಗಿದ್ದು, ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯ ಲಕ್ಕಪ್ಪಕೋಡಿ -ಅರ್ಬಿ ರಸ್ತೆ ತೀರಾ ಹದಗೆಟ್ಟಿದ್ದು, ಅನಿವಾರ್ಯ ಕಾರಣದಿಂದ ಜಡಿ ಮಳೆಗೆ ಸಾರ್ವಜನಿಕರೇ ಶ್ರಮದಾನ ನಡೆಸಿದ ಘಟನೆ ಜರುಗಿತು.

ಈ ರಸ್ತೆಯ ದುರಸ್ತಿ ಮಾಡಿಕೊಡುವಂತೆ ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಫಲಪ್ರದವಾಗಿರಲಿಲ್ಲ. ಸ್ಥಳೀಯ ಪಂಚಾಯತ್ ಕೂಡ ಈ ರಸ್ತೆ ದುರಸ್ಥಿ ಮಾಡಲು ನಿರಾಸಕ್ತಿ ತೋರಿದ ಕಾರಣ ಸಾರ್ವಜನಿಕರೇ ಶ್ರಮದಾನದ ಮೂಲಕ ರಸ್ತೆ ಸರಿಪಡಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಆಗುವಂತೆ ಪ್ರಯತ್ನ ಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಭಾಗದ ಏಳೆಂಟು ಮನೆಗಳ ನಿವಾಸಿಗಳು ಪೇಟೆಗೆ ಬರಲು ಈ ರಸ್ತೆಯನ್ನು ಬಳಸುವುದು ಮತ್ತು ರೋಗಿಗಳು ಮತ್ತು ಮಕ್ಕಳು, ವಯೋಮಾನದ ಜನರು ಇಲ್ಲಿ ಇರುವುದರಿಂದ ರಸ್ತೆ ಯ ದುರಸ್ತಿ ಅನಿವಾರ್ಯ ಆಗಿತ್ತು ಎಂದು ಸಾರ್ವಜನಿಕ ಅಭಿಪ್ರಾಯಿಸಿದ್ದಾರೆ.

ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುವ ಬಗ್ಗೆ ಮನಸ್ಸು ಮಾಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


























