ಪುತ್ತೂರು : ಸಹಾಯಕ ಲೆಕ್ಕಿಗ, ಕ.ರಾ.ರ.ಸಾ.ನಿಗಮ ಪುತ್ತೂರು ವಿಭಾಗದಲ್ಲಿ 33 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿರುವ ನಿತೀಶ್ ನಾಯ್ಕ.ಪಿ. ಕ.ರಾ.ರ.ಸಾ.ಪ.ಜಾ/ಪ.ಪಂಡದ ನೌಕರರ ಸಂಘದಿಂದ ರಾಜ್ಯ ಮಟ್ಟದ “ಸಾರಿಗೆ ರತ್ನ” ಪ್ರಶಸ್ತಿಗೆ ಭಾಜನರಾದರು.

ಬೆಂಗಳೂರು ಟೌನ್ ಹಾಲ್ ನಲ್ಲಿ ಪಶಸ್ತಿ ನೀಡಿ ಸನ್ಮಾನಿಸಲಾಯಿತು.
ಇವರು ಪುತ್ತೂರು ಪಡೀಲ್ ನಿವಾಸಿಯಾಗಿದ್ದು, ಪಡೀಲ್ ಲೋಕಯ್ಯ ನಾಯ್ಕ್, ಗೋಪಿ ರವರ ಪುತ್ರ. ಇವರ ಪತ್ನಿ ಪ್ರೇಮಲತಾ. ಎ ಸಹಾಯಕ ಅಂಕಿ ಅಂಶ ಅಧಿಕಾರಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಸನ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪುತ್ರಿಯಾರಾದ ಮೇಘಾನ ಎನ್.ಪಿ ಇನ್ಫೋಸಿಸ್ ನಲ್ಲಿ ಉದ್ಯೋಗದಲ್ಲಿದ್ದಾರೆ. ಸಂಜನಾ ಎನ್ ಪಿ ಸಿ ಎ ವ್ಯಾಸಂಗ ಮಾಡುತ್ತಿದ್ದಾರೆ.

























