ವಿಟ್ಲ : ರಸ್ತೆಯಲ್ಲಿ ಬಿದ್ದು ಸಿಕ್ಕಿದ ಪರ್ಸ್ ಅನ್ನು ಅದರ ವಾರಿಸುದಾರರಿಗೆ ನೀಡುವ ಮೂಲಕ ಪ್ರಕಾಶ್ ಹೋಟೆಲ್ ಮಾಲಕರಾದ ಮನೋಜ್ ರೈ ಪ್ರಾಮಾಣಿಕತೆ ಮೆರೆದಿದ್ದಾರೆ.

ಮನೋಜ್ ರವರು ಇಂದು ಬೆಳಿಗ್ಗೆ ಕಾಶಿಮಠ ಕಡೆಯಿಂದ ಬರುತ್ತಿದ್ದ ವೇಳೆ ರಸ್ತೆ ಬದಿ ಪರ್ಸ್ ಬಿದ್ದು ಸಿಕ್ಕಿದೆ.
ಈ ಬಗ್ಗೆ ವಿಚಾರಿಸಿದಾಗ ಆ ಪರ್ಸ್ ವಿಟ್ಲ ಗೃಹ ರಕ್ಷಕದಳದ ಸಿಬ್ಬಂದಿ ಜಯಂತ್ ಅವರದ್ದಾಗಿದ್ದು, ಅದರಲ್ಲಿ ಹಣದ ಜೊತೆಗೆ ಅವರ ಬೇಕಾಗುವ ಪ್ರಮುಖ ದಾಖಲೆಗಳಿದ್ದವು. ಅವೆಲ್ಲವುಗಳನ್ನು ಮನೋಜ್ ಜೋಪಾನವಾಗಿ ಹಿಂತಿರುಗಿಸಿದ್ದಾರೆ.
ಮನೋಜ್ ರವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.




























