ಕಡಬ : ತಾಲೂಕಿನ ನೆಟ್ಟಣದ ಕೇಂದ್ರೀಯ ಮರಗಳ ಸಂಗ್ರಹಾಲಯದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿದ್ದ ಮೂಲತಃ ಕಾಸರಗೋಡು ಸಮೀಪದ ಹೊಸದುರ್ಗ ನಿವಾಸಿ ರಾಮನಾಥ ಅರಳೀಕಟ್ಟೆ ಅವರ ಪುತ್ರ ಸುಭಾಷ್ ಬಿ. ಅವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಜು.28 ರಂದು ನಿಧನರಾದರು.

ಸುಭಾಷ್ ಅವರು 1990ರಲ್ಲಿ ಬೆಳ್ತಂಗಡಿಯಲ್ಲಿ ಅರಣ್ಯ ವೀಕ್ಷಕರಾಗಿ ಇಲಾಖಾ ಸೇವೆಗೆ ಸೇರಿದ್ದರು. ಬೆಳ್ತಂಗಡಿಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ಬಳಿಕ 2021ರಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ನೆಟ್ಟಣದ ಕೇಂದ್ರೀಯ ಮರ ಸಂಗ್ರಹಾಲಯಕ್ಕೆ ನೇಮಕಗೊಂಡು ಕಳೆದ ಎರಡೂವರೆ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.




























