ವಿಟ್ಲ:- ಇತ್ತೀಚೆಗೆ ಕೋಮು ದ್ವೇಷದ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಯತ್ನಿಸಿದ ಸಂಸದ ತೇಜಸ್ವಿಸೂರ್ಯ ಅವರ ವಿರುದ್ಧ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಅವರು ವಾಗ್ದಳಿಯನ್ನು ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ
ಈ ಬಗ್ಗೆ ಮಾಧ್ಯಮದ ಹೇಳಿಕೆ ಮುಖಾಂತರ ಮಾತನಾಡಿದ ಎಂ.ಎಸ್ ಮಹಮ್ಮದ್ ಅವರು
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಡಾ.ಅಂಬೇಡ್ಕರ್ ಅವರು ಬರೆದ ಸಂವಿಧಾನದ ಪ್ರಕಾರ ಒಬ್ಬ ಪಾರ್ಲಿಮೆಂಟ್ ಸದಸ್ಯನಾಗಿ ಆಯ್ಕೆಯಾದಂತಹ ತೇಜಸ್ವಿ ಸೂರ್ಯ ಅದೇ ಸಂವಿಧಾನದಲ್ಲಿ ಈ ಭವ್ಯವಾದ ಪವಿತ್ರವಾದ ಭಾರತ ದೇಶದ ಮಣ್ಣಿನಲ್ಲಿ ಹುಟ್ಟಿದ ಪ್ರತಿಯೊಂದು ಧರ್ಮ ಜಾತಿಯ ಜನರಿಗೆ ಸಮಾನವಾಗಿ ಜೀವಿಸುವ ಅವಕಾಶವನ್ನು ಕೊಟ್ಟಂತಹ ಈ ಭಾರತ ದೇಶದಲ್ಲಿ ಹುಟ್ಟಿದ ತೇಜಸ್ವಿಸೂರ್ಯ ಇವರಿಗೆ ಭಾರತದ ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವಂತಹ ಹ್ರದಯ ಶ್ರೀಮಂತಿಕೆ ಇಲ್ಲದೇ ಇರುವುದು ಅತ್ಯಂತ ದುರಾದ್ರಷ್ಟಕರವಾಗಿದೆ ಎಂದರು
ಒಬ್ಬ ಪಾರ್ಲಿಮೆಂಟ್ ಸದಸ್ಯನ ವಿಚಾರಗಳನ್ನು ನಾವು ಅವಲೋಕನೆ ಮಾಡಿದಾಗ ತೇಜಸ್ವಿಸೂರ್ಯ ಅವರಿಗೆ ಪಾರ್ಲಿಮೆಂಟ್ ಸದಸ್ಯರಾಗುವ ಯೋಗ್ಯತೆ ಇಲ್ಲ
205 ಸಿಬ್ಬಂದಿಗಳಲ್ಲಿ ಕೇವಲ 17 ಜನ ಒಂದು ಸಮುದಾಯಕ್ಕೆ ಸೇರಿದ್ದು ಅವರನ್ನು ಬೊಟ್ಟು ಮಾಡಿಕೊಂಡು ಕೋಮು ಭಾವನೆಯನ್ನು ಕೆರಳಿಸುವ ಕೋಮುವಾದಿ ತೇಜಸ್ವಿಸೂರ್ಯ ಇನ್ನಾದರೂ ಭಾರತದ ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡು ರಾಜಕೀಯ ಮಾಡುವುದು ಉತ್ತಮವಾಗಿದೆ ಎಂದರು
ಕೊರೋನವನ್ನು ನಿಯಂತ್ರಣ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಕೇಂದ್ರ & ರಾಜ್ಯ ಸರಕಾರದ ವೈಫಲ್ಯವನ್ನು ಮರೆಮಾಚಿ ಕೋಮು ದ್ವೇಷವನ್ನು ಸಮಾಜದಲ್ಲಿ ಕೆರಳಿಸಿ ಜನರ ಮನಸ್ಸನ್ನು ಬೇರೆ ಕಡೆಗೆ ತಿರುಗಿಸುವಂತಹ ಇಂತಹ ಹೇಳಿಕೆಯನ್ನು ಸಮಾಜದ ಪ್ರಜ್ನಾವಂತ ನಾಗರೀಕರು ಅರ್ಥ ಮಾಡಿಕೊಂಡಿದ್ದಾರೆ ಎಂದರು
ಇದರ ಬಗ್ಗೆ ಪತ್ರಿಕಾಗೋಷ್ಠಿ ಮಾಡುವಾಗ ನಿಮ್ಮ ಬಳಿ ಕೂತಿದ್ದ ಬೆಡ್ ಅವ್ಯವಹಾರ ನಡೆಸಿರುವ ಶಾಸಕ ಸತೀಶ್ ರೆಡ್ಡಿ ಎಂಬುದನ್ನು ತಿಳಿದುಕೊಂಡು ಮಾತನಾಡಬೇಕಿತ್ತು ಎಂದು ತೇಜಸ್ವಿಸೂರ್ಯ ವಿರುದ್ಧ ವಾಗ್ದಳಿ ನಡೆಸಿದರು
ಅದೆಷ್ಟೋ ಜನರು ತಮ್ಮ ಪ್ರಾಣ ತ್ಯಾಗವನ್ನು ಮಾಡಿದ ಈ ಸಂದರ್ಭದಲ್ಲಿ ನೈತಿಕತೆಯನ್ನು ಹೊತ್ತು ರಾಜ್ಯದ ಮುಖ್ಯಮಂತ್ರಿಗಳು ಅವರನ್ನು ರಾಜೀನಾಮೆ ಕೊಡಿಸುವ ಕೆಲಸವನ್ನು ನೀವು ಮಾಡಬೇಕಿತ್ತು ಅದನ್ನು ಮಾಡದೇ ಯಾರೋ ಮೇಲೆ ಗೂಬೆ ಕೂರಿಸುವ ನೀವು ಮುಂದಿನ ದಿನಗಳಲ್ಲಿ ಆದರೋ ನಿಮ್ಮ ನೀಚ ಬುದ್ದಿಯನ್ನು ಬಿಟ್ಟು ಜೀವಿಸುವುದು ಒಲಿತು ಎಂದು ತೇಜಸ್ವಿಸೂರ್ಯ ವಿರುದ್ದ ನೇರವಾಗಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ