ಪುತ್ತೂರು : ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಪಿಕಪ್ ನಡುವೆ ಡಿಕ್ಕಿಯಾದ ಘಟನೆ ಕಬಕದಲ್ಲಿ ನಡೆದಿದೆ.

ಸೆಂಟ್ರಿಂಗ್ ಕೆಲಸದ ನಿಮಿತ್ತ ಅನಂತಾಡಿಯಿಂದ ಬನ್ನೂರು ಕಡೆ ತೆರಳುತ್ತಿದ್ದ ಪಿಕಪ್ ವಾಹನ ಹಾಗೂ ಮಂಗಳೂರಿನಿಂದ ಪುತ್ತೂರು ಕಡೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಹಿಂಬದಿಯಿಂದ ಡಿಕ್ಕಿಯಾಗಿದೆನ್ನಲಾಗಿದೆ.
ಘಟನೆಯಲ್ಲಿ ಪಿಕಪ್ ವಾಹನದಲ್ಲಿದ್ದ ಮೂವರಿಗೆ ಸಣ್ಣ-ಪುಟ್ಟ ಗಾಯವಾಗಿದೆ ಎಂದು ವರದಿಯಾಗಿದೆ.
























