ಧರ್ಮಸ್ಥಳ : ಅನ್ಯಕೋಮಿನ ಯುವಕನೋರ್ವ ತನ್ನ ಆಟೋ ರಿಕ್ಷಾದಲ್ಲಿ ಬಾಡಿಗೆ ಹಿನ್ನೆಲೆ ಹಿಂದೂ ಯುವತಿಯನ್ನು ಕರೆದೊಯ್ದ ವಿಚಾರಕ್ಕೆ ಸಂಬಂಧಿಸಿದಂತೆ ತಂಡವೊಂದು ಹಲ್ಲೆ ನಡೆಸಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಜಿರೆ ನಿವಾಸಿ ಮಹಮ್ಮದ್ ಆಸೀಕ್ ಎಂಬಾತನು ಬಾಡಿಗೆಗೆ ಎಂದು ತನ್ನ ಆಟೋ ರಿಕ್ಷಾದಲ್ಲಿ ಉಜಿರೆಯಿಂದ ಬಾಡಿಗೆಗೆ ಹಿಂದೂ ಯುವತಿಯೊಬ್ಬರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಬಂದು ಬಾಡಿಗೆ ಮುಗಿಸಿ ವಾಪಾಸ್ಸು ಉಜಿರೆ ಕಡೆಗೆ ತೆರಳುತ್ತಿರುವ ಸಮಯ ಯಾರೋ ಅಪರಿಚಿತರ ಗುಂಪೊಂದು ಆಟೋ ರಿಕ್ಷಾವನ್ನು ನಿಲ್ಲಿಸಿ ಮಹಮ್ಮದ್ ಆಸಿಕ್ ಎಂಬಾತನಿಗೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 48/2023 ಕಲಂ: 143.147.341.323.504.506.R/W 149 ಐಪಿಸಿ ಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

























