ಪುತ್ತೂರು : ಬಪ್ಪಳಿಗೆ ಅಂಗನವಾಡಿ ಕೇಂದ್ರದಲ್ಲಿ ಆದರ್ಶ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘದ ವತಿಯಿಂದ ಆಟಿಕೂಟ ಕಾರ್ಯಕ್ರಮ ನಡೆಯಿತು.

ಸಂಘದ ಹಿರಿಯ ಸದಸ್ಯರಾದ ವಿಶಾಲಾಕ್ಷಿ ಹೆಗ್ಡೆ, ಅಧ್ಯಕ್ಷರಾದ ನಳಿನಿ ಕಾರ್ಯದರ್ಶಿಯಾದ ವನಜಾ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಆಟಿ ತಿಂಗಳ ವಿಶೇಷತೆ ಬಗ್ಗೆ ಸದಸ್ಯರಾದ ನಳಿನಾಕ್ಷಿ ಮಾಹಿತಿ ನೀಡಿದರು.

ಆಟಿ ಕಳೆಂಜದ ಬಗ್ಗೆ ಸದಸ್ಯರಾದ ಸ್ವರ್ಣಲತಾ ಹೆಗ್ಡೆ ಮಾಹಿತಿ ನೀಡಿದರು.
ಆಟಿಕೂಟದ ಬಗ್ಗೆ ಸದಸ್ಯರಾದ ಗುಲಾಬಿ ಆಟಿ ತಿಂಗಳ ತಿಂಡಿ-ತಿನಸುಗಳು ನಮ್ಮ ಆರೋಗ್ಯದ ಮೇಲೆ ಬೀರುವ ಪ್ರಯೋಜನಗಳ ಬಗ್ಗೆ ವಿವರವಾದ ಮಾಹಿತಿಯನ್ನು ಅಂಗನವಾಡಿ ಕಾರ್ಯಕರ್ತೆ, ಸದಸ್ಯರಾದ ಸುಮಿತ್ರ ಹರೀಶ್ ನೀಡಿದರು.

ಕಾರ್ಯಕ್ರಮದಲ್ಲಿ ಆಟಿ ತಿಂಗಳ ‘ತಿಂಡಿ-ತಿನಸುಗಳ’ ಪ್ರದರ್ಶನ ನಡೆಯಿತು. ಸದಸ್ಯರಾದ ವೇದಾವತಿ ಅದೃಷ್ಟ ವಿನ್ನರ್ ಆಗಿ ಆಯ್ಕೆಗೊಂಡರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರದ ಪುಟಾಣಿಗಳು, ಅಂಗನವಾಡಿ ಸಹಾಯಕಿ, ಸದಸ್ಯರಾದ ಪ್ರೇಮಾ, ಇತರ ಸದಸ್ಯರಾದ ಗಿರಿಜ, ಜಯಂತಿ, ಶಾಕೀರ ಬಾನು, ಉಮಾವತಿ ಹಾಗೂ ಆಶಾ ಉಪಸ್ಥಿತರಿದ್ದರು.





