ಪುತ್ತೂರು : ಮುಂಡೂರು ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಯಾಗಿದ್ದಂತಹ ಗೀತಾ ಬಿ.ಎಸ್. ರನ್ನು ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರ ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ಬೀಳ್ಕೊಡಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಪ್ರಸ್ತಾವಿಕ ನುಡಿಗಳನ್ನು ಆಡಿದಂತಹ ಪಂಚಾಯತ್ನ ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ ಕಳೆದ ಎರಡುವರೆ ವರ್ಷಗಳಿಂದ ಮುಂಡೂರು ಗ್ರಾಮ ಪಂಚಾಯತ್ ನಲ್ಲಿ ನಿಸ್ವಾರ್ಥವಾಗಿ ಸೇವೆಯನ್ನು ಸಲ್ಲಿಸಿರುವ ಅಂತಹ ಅಭಿವೃದ್ಧಿ ಅಧಿಕಾರಿಯವರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸದಸ್ಯರಾದ ಕರುಣಾಕರ ಗೌಡ ಎಲಿಯ, ಕಮಲೇಶ್ ಎಸ್ ವಿ ಹಾಗೂ ಚಂದ್ರಶೇಖರ್ ಏನ್ ಎಸ್ ಡಿ ಶುಭಾಶಯದ ಮಾತುಗಳನ್ನಾಡಿದರು.
ಪಂಚಾಯತ್ನ ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಪುಷ್ಪ ಎನ್ ಮಾತನಾಡಿ, ಅತ್ಯಂತ ಆತ್ಮೀಯವಾದ ಒಡನಾಟದಿಂದ ಕೂಡಿದ್ದ ಪಂಚಾಯತ ಅಭಿವೃದ್ಧಿ ಅಧಿಕಾರಿಯವರು ಉತ್ತಮ ರೀತಿಯಲ್ಲಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು ಮತ್ತು ವಿಳಂಬ ನೀತಿ ತೋರದೆ ಕೆಲಸ ಕಾರ್ಯಗಳನ್ನು ನಡೆಸಿಕೊಡುತ್ತಿದ್ದರು ಎಂದು ಉಲ್ಲೇಖಿಸಿದರು.
ಕಾರ್ಯಕ್ರಮವನ್ನು ಪಂಚಾಯತಿ ಕ್ಲಾಕ್ ಕಂ ಡೇಟಾ ಎಂಟ್ರಿ ಆಪರೇಟರ್ ಶಶಿಧರ್ ಕೆ ಮಾವಿನಕಟ್ಟೆ ನಿರೂಪಿಸಿದರು. ಪಂಚಾಯತ್ ಸಿಬ್ಬಂದಿಗಳಾದ ಕೊರಗಪ್ಪ ನಾಯ್ಕ, ಸತೀಶ್ ಹೆಚ್. ಮೋಕ್ಷ ಎನ್ ಹಾಗೂ ಕವಿತಾ ಎಂ ಎಸ್ ಸಹಕರಿಸಿದರು.