ಪುತ್ತೂರು: ಮೈಯೆಲ್ಲಾ ತುರಿಕೆ ಸಮಸ್ಯೆಯಿಂದ
ಅಸ್ವಸ್ಥಗೊಂಡಿದ್ದ ಪರವೂರಿನ ವ್ಯಕ್ತಿಯೊಬ್ಬರು ಕಬಕದ
ಬಸ್‌ತಂಗುದಾಣದಲ್ಲಿ ಅಸ್ವಸ್ಥಗೊಂಡಿರುವ ಮತ್ತು
ಆತನನ್ನು ಸ್ಥಳೀಯ ಗ್ರಾ.ಪಂ ಅಧ್ಯಕ್ಷರ ಸಹಕಾರದೊಂದಿಗೆ
ಪುತ್ತೂರು ಶಾಸಕರ ವಾರ್‌ರೂಮ್ ನೇತೃತ್ವದಲ್ಲಿ ನೆಲ್ಲಿಕಟ್ಟೆ
ಕೋವಿಡ್ ಗಾಗಿ ಪರಿವರ್ತನೆ ಮಾಡಿದ ತಾತ್ಕಾಲಿಕ
ಆಶ್ರಯ ತಾಣಕ್ಕೆ ಸೇರ್ಪಡೆಗೊಳಿಸಿದ ಘಟನೆ ಮೇ 8ರಂದು ನಡೆದಿದೆ.
ಕಬಕದ ಬಸ್ ತಂಗುದಾಣದಲ್ಲಿ ಹಿಂದಿ ಅರ್ಥೈಸಿಕೊಳ್ಳುವ
ಪರವೂರಿನ ವ್ಯಕ್ತಿಯೊಬ್ಬರು ತುರಿಕೆ ಸಮಸ್ಯೆಯಿಂದ
ಅಸ್ವಸ್ಥಗೊಂಡಿರುವುದನ್ನು ಗಮನಿಸಿದ ಸ್ಥಳೀಯ ಗ್ರಾ.ಪಂ
ಸದಸ್ಯ ನಝೀರ್ ಅವರು ಪಂಚಾಯತ್ ಅಧ್ಯಕ್ಷ ವಿನಯ
ಕಲ್ಲೇಗ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದಂತೆ ತಕ್ಷಣ
ಅಪರಿಚಿತ ವ್ಯಕ್ತಿಯನ್ನು ವಿಚಾರಿಸಿದಾಗ ತನ್ನ ಹೆಸರು
ಸುಂದರ್ ಊರಿನ ಹೆಸರು ಮಾತ್ರ ಸರಿಯಾಗಿ ಹೇಳುತ್ತಿಲ್ಲವಾದರೂ ಆತನನ್ನು ಉಪಚರಿಸಿ, ಪಂಚಾಯತ್‌ನ ವಠಾರದಲ್ಲಿ ಸ್ನಾನ ಮಾಡಿಸಿ ಬಟ್ಟೆ ಕೊಡಿಸಿ, ಪುತ್ತೂರು ಶಾಸಕರ ವಾರ್ ರೂಮ್ನ ಪುರುಷೋತ್ತಮ ಮುಂಗ್ಲಿಮನೆ ಅವರ ನೇತೃತ್ವದಲ್ಲಿ ನೆಲ್ಲಿಕಟ್ಟೆಯಲ್ಲಿ ಕೋವಿಡ್ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಮಾರ್ಪಾಡಿಸಿದ ಭಿಕ್ಷುಕರ ಆಶ್ರಯ ತಾಣಕ್ಕೆ ಕರೆ ತರಲಾಯಿತು.
ಕಬಕ ಗ್ರಾ.ಪಂನ ನವೀನ್, ಪ್ರವೀಣ್, ಲಿಂಗಪ್ಪ, ಜಯರಾಮ ಅವರು ವ್ಯಕ್ತಿಯನ್ನು ಪುತ್ತೂರು ಆಶ್ರಯ ತಾಣಕ್ಕೆ ತರುವಲ್ಲಿ ಸಹಕರಿಸಿ, ನೆಲ್ಲಿಕಟ್ಟೆಆಶ್ರಯ ತಾಣದಲ್ಲಿ ಸುಂದರ್ ಅನ್ನುವ ವ್ಯಕ್ತಿಗೆ ಊಟೋಪಚಾರ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಸೇವಾ ಭಾರತಿ ಪುತ್ತೂರಿನ ಕೃಷ್ಣಪ್ರಸನ್ನ
ಉಪಸ್ಥಿತರಿದ್ದರು.