ಚಿಕ್ಕಮಗಳೂರು: 13 ವರ್ಷದ ಪ್ರೀತಿಗಾಗಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ನಾಟಕವಾಡಿದ್ದ ಪತ್ನಿಯ ನಿಜ ಬಣ್ಣ ತನಿಖೆಯಲ್ಲಿ ಬಯಲಾಗಿದ್ದು, ಇಬ್ಬರು ಯಗಟಿ ಪೊಲೀಸರ ಅತಿಥಿಯಾಗಿದ್ದಾರೆ.
ಇದೀಗ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕಡೂರು ತಾಲೂಕಿನ ಹನುಮನಹಳ್ಳಿ ಗ್ರಾಮದ ಪಾವನ ಮತ್ತು ಸಂಜು ಬಂಧಿತ ಇಬ್ಬರು ಆರೋಪಿಗಳು.
ಪ್ರಿಯಕರನ ಜೊತೆ ಸೇರಲು ಪತ್ನಿಯೇ ತನ್ನ ಗಂಡನನ್ನು ಹತ್ಯೆ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಈ ಘಟನೆಯು ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ.
ನವೀನ್ (28) ಕೊಲೆಯಾದವರು.
ಸಂಜಯ್ ಎನ್ನುವರನ್ನು ನವೀನ್ ಪತ್ನಿ ಪಾವನ ಆಗಾಗ ಭೇಟಿಯಾಗುತ್ತಿದ್ದಳು. ಇದಕ್ಕೆ ಪತಿ ಅಡ್ಡವಾಗುತ್ತಿದ್ದಾನೆಂದು ಊಟದಲ್ಲಿ ನಿದ್ದೆ ಮಾತ್ರೆಗಳನ್ನು ಹಾಕಿ ಜ್ಞಾನ ತಪ್ಪಿಸಿದ್ದಾಳೆ. ಬಳಿಕ ಪ್ರಿಯಕರನ ಜೊತೆ ಸೇರಿ ಬೈಕ್ನಲ್ಲಿ ಪ್ರಜ್ಞೆ ತಪ್ಪಿದ ಪತಿಯನ್ನು ತಂದು ಯಗಟಿ ಕೆರೆ ಬಳಿ ಎಸೆದು ಹೋಗಿದ್ದರು.
ಆಗಸ್ಟ್ 6 ರಂದು ಯಗಟಿ ಕೆರೆ ಬಳಿ ನವೀನ್ ಮೃತದೇಹ ಪತ್ತೆಯಾಗಿತ್ತು. ಈ ವೇಳೆ ಇದು ಸಹಜ ಸಾವಲ್ಲ, ಕೊಲೆ ಎಂದು ಪೋಷಕರು ಯಗಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಕೊಲೆ ಮಾಡಿರುವುದು ಪತ್ನಿಯೇ ಅನ್ನೋದನ್ನ ಪತ್ತೆ ಹಚ್ಚಿದ್ದಾರೆ. ಅಲ್ಲದೇ ಪೊಲೀಸರ ತನಿಖೆಯಲ್ಲಿ ಆರೋಪಿಗಳು ಸತ್ಯ ಬಾಯಿ ಬಿಟ್ಟಿದ್ದಾರೆ.