ಪುತ್ತೂರು : ಮುಂಡೂರು ಗ್ರಾಮ ಪಂಚಾಯತ್ ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಚಂದ್ರಶೇಖರ್ ಎನ್.ಎಸ್.ಡಿ ಹಾಗೂ ಉಪಾಧ್ಯಕ್ಷರಾಗಿ ಯಶೋಧ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಯಶೋಧ ಅವಿರೋಧವಾಗಿ ಆಯ್ಕೆಯಾದರೆ., ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚಂದ್ರಶೇಖರ್ ಎನ್.ಎಸ್.ಡಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಮಲೇಶ್ ಸರ್ವೆದೋಳಗುತ್ತು ಅವರು ನಾಮಪತ್ರ ಸಲ್ಲಿಸಿದ್ದರು.
ಅಂತಿಮವಾಗಿ ಚಂದ್ರಶೇಖರ್ ಎನ್.ಎಸ್.ಡಿ ಅವರು 12 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು.
ಕಮಲೇಶ್ 8 ಮತಗಳನ್ನು ಪಡೆದುಕೊಂಡರು.

























