ಪುತ್ತೂರು : ದೈವ ನರ್ತನ ಸೇವೆಗೈಯುವ ಖ್ಯಾತ ಕುಟುಂಬವಾದ ಪೆರ್ಲಂಪಾಡಿಯ ರಮೇಶ್ ಅಜಲರು ಕೆಲ ಸಮಯಗಳಿಂದ ಅನಾರೋಗ್ಯದಿಂದಿದ್ದು, ಅವರ ಮನೆಗೆ ಪುತ್ತಿಲ ಪರಿವಾರದವರು ಭೇಟಿ ನೀಡಿದರು.

ಪುತ್ತಿಲ ಪರಿವಾರದ ವತಿಯಿಂದ ರಮೇಶ್ ರ ಮನೆಗೆ ಭೇಟಿ
ನೀಡಿ ಧನಸಹಾಯ ಮತ್ತು ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ
ಮಾರ್ತ, ನಗರಾಧ್ಯಕ್ಷ ಅನಿಲ್ ತೆಂಕಿಲ, ಉಪಾಧ್ಯಕ್ಷ ರಾಜ್
ಶೆಟ್ಟಿ, ಶನ್ಮಿತ್ ರೈ, ಕೊಳ್ತಿಗೆ ಗ್ರಾಮದ ಸತ್ಯಪ್ರಕಾಶ್ ಕುಂಟಿಕಾನ, ಕಾರ್ಯದರ್ಶಿ ಶಶಿಕುಮಾರ್, ರಜನೀಶ್ ಬೇರಿಕೆ, ರಾಜೇಶ್ ಶೆಟ್ಟಿ ಮಾಣಿಲ ಸಹಿತ ಹಲವರು ಉಪಸ್ಥಿತರಿದ್ದರು.

























