ಬಂಟ್ವಾಳ : ಬೈಪಾಸ್ ನಿವಾಸಿ, ಬಿ.ಸಿ.ರೋಡ್ ಕೈಕಂಬ ಫೈವ್ ಸ್ಟಾರ್ ವೈನ್ ಶಾಪ್ ಮಾಲಕ ದಾಮೋದರ ಸಾಲ್ಯಾನ್ (83) ಅವರು ಅಸೌಖ್ಯದಿಂದ ಇಂದು ಬೆಳಗ್ಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ದಾಮೋದರ ಸಾಲ್ಯಾನ್ ಅವರ ಹುಟ್ಟೂರು ಬೆಳ್ತಂಗಡಿಯ ಬಲ್ಪುಂಜದಲ್ಲಿ ಸಂಜೆ 6 ಗಂಟೆಗೆ ಅಂತಿಮ ಕಾರ್ಯ ನಡೆಯಲಿದೆ.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿ ಮತ್ತು ಬಂಧು-ಬಳಗವನ್ನು ಅಗಲಿದ್ದಾರೆ.

























