ಪುತ್ತೂರು : ಯುವಕನೋರ್ವ ವೀಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ಕೆದಂಬಾಡಿ ನಿವಾಸಿ ಅಬ್ದುಲ್ ನಾಸಿರ್ (28) ನೀಡಿದ ದೂರಿನಂತೆ ಬೆಳ್ಳಾರೆಯ ಅದ್ರಾಮ, ಮೊಯ್ದು, ತಾಜು, ಅಬ್ದುಲ್ಲಾ, ಸಮೀರ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಬ್ದುಲ್ ನಾಸಿರ್ ಆ.17 ರಂದು ರಾತ್ರಿ ಬೆಳ್ಳಾರೆ ನಿವಾಸಿ ಅದ್ರಾಮ ಎಂಬವರ ಮಗಳ ಚಿಕಿತ್ಸೆಗಾಗಿ ಅವರ ಕಾರಿನಲ್ಲಿ ಚಾಲಕರಾಗಿ ಅದ್ರಾಮ ರವರ ಪತ್ನಿ ಹಾಗೂ ಮಗಳೊಂದಿಗೆ ಆಸ್ಪತ್ರೆಗೆ ಹೋಗಿ ವಾಪಾಸ್ಸು ಅವರನ್ನು ಮನೆಗೆ ಬಿಟ್ಟು ತನ್ನ ಮನೆಗೆ ತೆರಳುತ್ತಿದ್ದಾಗ ಅದ್ರಾಮ ಹಾಗೂ ಮೊಯ್ದು, ತಾಜು, ಅಬ್ದುಲ್ಲಾ, ಸಮೀರ್ ಮತ್ತು ಇತರರು ಸೇರಿ ಅದ್ರಾಮ ರವರ ಪತ್ನಿಯನ್ನು ಪ್ರೀತಿಸುತ್ತಿರುವ ಹಿನ್ನೆಲೆಯಲ್ಲಿ ತಕರಾರು ತೆಗೆದು ತಡೆದು ನಿಲ್ಲಿಸಿ ಅಬ್ದುಲ್ ನಾಸಿರ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ಪುತ್ತೂರಿನ ಕೂರ್ನಡ್ಕ ಎಂಬಲ್ಲಿ ಕಾರಿನಿಂದ ಇಳಿಸಿ ಹೋಗಿರುತ್ತಾರೆ.
ನಾಸೀರ್ ತಾನು ಪ್ರೀತಿಸುತ್ತಿರುವ ಅದ್ರಾಮ ರವರ ಪತ್ನಿಯು ತನ್ನ ದೂರವಾಣಿ ಕರೆ ಸ್ವೀಕರಿಸದೇ ತಾತ್ಸಾರ ಮಾಡುತ್ತಿರುವುದರಿಂದ ಹಾಗೂ ಅದ್ರಾಮ ಮತ್ತು ಇತರರು ಹಲ್ಲೆ ಮಾಡಿರುವುದರಿಂದ ಅವಮಾನಗೊಂಡ ಹಿನ್ನೆಲೆ ಆ.22 ರಂದು ಸಂಟ್ಯಾರಿನ ಸಮೀಪ ಕಟ್ಟತ್ತಾರು ಎಂಬಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 55/2023 ಕಲಂ 341,323, 506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

























