ಬಂಟ್ವಾಳ : ರಾ.ಹೆ. 75ರ ಕಲ್ಲಡ್ಕ ಸಮೀಪದ ಕೆ.ಸಿ.ರೋಡಿನ ಗ್ಯಾರೇಜೊಂದರಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನವನ್ನು ಕಳವು ನಡೆಸಿದ ಘಟನೆ ನಡೆದಿದೆ.
ಮಾಣಿ ನಿವಾಸಿ ನವೀನ್ ಎಂಬವರು ಆ.18 ರಂದು ಸಂಜೆ ಪಿಕಪ್ ವಾಹನವನ್ನು ನಿಲ್ಲಿಸಿ ತೆರಳಿದ್ದು, ಆ.22 ರಂದು ಬೆಳಗ್ಗೆ ಬಂದು ನೋಡಿದಾಗ ವಾಹನ ಅಲ್ಲಿರಲಿಲ್ಲ. ಈ ಕುರಿತು ಪರಿಸರದಲ್ಲಿ ವಿಚಾರಣೆ ನಡೆಸಿದಾಗಲೂ ಪತ್ತೆಯಾಗಿಲ್ಲ.
ಕಳವಾದ ಪಿಕಪ್ ವಾಹನದ ಮೌಲ್ಯ 3 ಲಕ್ಷ ರೂ. ಎಂದು ಅಂದಾಜಿಸಲಾಗಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























