ಪುತ್ತೂರು : ಠಾಣೆಯ ಬಳಿಯೇ ಯುವಕನಿಂದ ಚೂರಿ ಇರಿತಕ್ಕೊಳಕ್ಕಾಗಿ ಹತ್ಯೆಯಾದ ವಿಟ್ಲ ಕುದ್ದುಪದವಿನ ಗೌರಿ ಮನೆಗೆ ಪುತ್ತಿಲ ಪರಿವಾರ ಭೇಟಿ ನೀಡಿ ಹೆತ್ತವರಿಗೆ ಹಾಗೂ ಕುಟುಂಬ ವರ್ಗಕ್ಕೆ ಸಾಂತ್ವನ ತಿಳಿಸಿದೆ.

ಆಗಸ್ಟ್ 24 ರಂದು ಪುತ್ತೂರಿನಲ್ಲಿ ಠಾಣೆಯ ಬಳಿಯೇ ಯುವಕನಿಂದ ಹತ್ಯೆ ನಡೆದಿತ್ತು.
ಹತ್ಯೆಯಾದ ಯುವತಿ ಗೌರಿ ಮನೆಗೆ ಅರುಣ್ ಪುತ್ತಿಲ ಭೇಟಿ ನೀಡಿ ತಂದೆ,ತಾಯಿ, ಸಹೋದರಿಗೆ ಸಾಂತ್ವನ ಹೇಳಿದರು.

2 ವರ್ಷದ ಹಿಂದೆಯೇ ಈ ಯುವಕ ಗೌರಿಗೆ ತೊಂದರೆ ಕೊಟ್ಟ ಬಗ್ಗೆ ಠಾಣೆಯಲ್ಲಿ ಕೇಸ್ ಕೊಟ್ಟಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಗಂಭೀರ ವಿಷಯವನ್ನು ಹೆತ್ತವರು ಈ ಸಂದರ್ಭ ತಿಳಿಸಿದ್ದು, ಯುವತಿ ಕೆಲಸ ಮಾಡುತ್ತಿದ್ದ ಹಲವು ಕಡೆ ಹೋಗಿ ಆರೋಪಿ ಯುವಕ ತೊಂದರೆ ಕೊಡುತ್ತಿದ್ದ ಎಂದು ಹೆತ್ತವರು ಹೇಳಿದರು. ಮುಂದೆಯೂ ಈತನಿಂದ ನಮ್ಮ ಕುಟುಂಬಕ್ಕೆ ತೊಂದರೆಯಿದೆ ಎಂದು ಹೆತ್ತವರು ಆತಂಕ ವ್ಯಕ್ತಪಡಿಸಿದರು.

ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಮತ್ತು ಕುಟುಂಬದ ಆಧಾರ ಸ್ತಂಭವಾಗಿದ್ದ ಮಗಳ ಹತ್ಯೆಯಿಂದ ಬಡ ಕುಟುಂಬ ನೊಂದಿದ್ದು ಸರಕಾರ ಸೂಕ್ತ ಪರಿಹಾರ ಘೋಷಿಸಬೇಕೆಂದು ಅರುಣ್ ಪುತ್ತಿಲ ಪೊಲೀಸ್ ವರಿಷ್ಠಾಧಿಕಾರಿಯವರಲ್ಲಿ ಮಾತನಾಡಿ ಮನವಿ ಮಾಡಿಕೊಂಡರು.
ಪುತ್ತಿಲ ಪರಿವಾರದ ಪ್ರಮುಖರಾದ ರಘುನಾಥ ಶೆಟ್ಟಿ, ಅನಿಲ್ ತೆಂಕಿಲ, ಶ್ರೀಕೃಷ್ಣ ವಿಟ್ಲ, ಶರತ್ ಎನ್.ಎಸ್. ಜೊತೆಗಿದ್ದರು


























