ಉಪ್ಪಿನಂಗಡಿ : ಪ್ರೀತಿ ವಿಚಾರಕ್ಕೆ ಯುವಕನಿಗೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ನಿಡ್ಪಳ್ಳಿ ನಿವಾಸಿ ಸುನೀಲ್ ಕುಮಾರ್ (32) ಎಂಬವರು ನೀಡಿದ ದೂರಿನ ಮೇರೆಗೆ ಪ್ರವೀಣ್ ಮತ್ತು ಶೇಖರ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆ.29 ರಂದು ಸಂಜೆ ಸುನೀಲ್ ಉಪ್ಪಿನಂಗಡಿಯ ಅಂಗಡಿಯಲ್ಲಿ ಕೆಲಸದಲ್ಲಿರುವಾಗ ಪ್ರವೀಣ್ ಮತ್ತು ಶೇಖರ ಎಂಬವರುಗಳು ಅಂಗಡಿಗೆ ಬಂದು ಆರೋಪಿಗಳ ಸಂಬಂಧಿತೆಯಾಗಿರುವ ಯುವತಿಯನ್ನು ಸುನೀಲ್ ಪ್ರೀತಿ ಮಾಡುತ್ತಿರುವ ಹಾಗೂ ಮೆಸೇಜ್ ಮಾಡುತ್ತಿರುವ ವಿಚಾರದಲ್ಲಿ ತಕರಾರು ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಅಂಗಡಿಯಲ್ಲಿದ್ದ ಸ್ಕ್ರೂ ಡ್ರೈವರ್ ನಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 116/2023 ಕಲಂ: 448, 504, 323, 324, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

























