ಪುತ್ತೂರು : ಹಿಂದೂ ಜಾಗರಣ ವೇದಿಕೆ ಈಶ್ವರ ಮಂಗಳ ಇದರ ನೇತೃತ್ವದಲ್ಲಿ ರಕ್ಷಾಬಂಧನದ ಪ್ರಯುಕ್ತ ಈಶ್ವರಮಂಗಲ ಪೇಟೆಯಲ್ಲಿ ರಕ್ಷಾಬಂಧನ ಆಚರಿಸುವುದರ ಜೊತೆಗೆ ಪ್ರತಿಯೊಬ್ಬರಿಗೂ ರಕ್ಷೆಯನ್ನು ಕಟ್ಟಿ ಸಿಹಿ ನೀಡಿ ಸಹೋದರತೆಯ ಸಂದೇಶವನ್ನು ಸಾರಲಾಯಿತು.

ಮುಂಬರುವ ಈಶ್ವರ ಮಂಗಳ ಮೊಸರು ಕುಡಿಕೆ ಉತ್ಸವದ 2023 ರ ಆಮಂತ್ರಣ ಪತ್ರಿಕೆಯನ್ನು ಕೂಡ ಈಶ್ವರಮಂಗಲಪೇಟೆಯಲ್ಲಿ ಹಂಚಲಾಯಿತು.

ವಿಶೇಷವಾಗಿ ರಕ್ಷಾಬಂಧನದ ದಿನವಾದ ಇಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅತ್ಯಂತ ಬಡ ಕುಟುಂಬಕ್ಕೆ ಸೇರಿದ ವಜ್ರ ಮೂಲೆ ಕಾಲೋನಿಯ ಜಯ ಎಂಬವರಿಗೆ ಸಂಘಟನೆಯಿಂದ ಸಂಗ್ರಹವಾದ ಸೇವಾನಿಧಿ ರೂ 30,000 ಅನ್ನು ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲದ ಗೌರವಾಧ್ಯಕ್ಷರಾದ ಕೃಷ್ಣ ಭಟ್ ಮುಂಡ್ಯ ಅವರ ನೇತೃತ್ವದಲ್ಲಿ ನೀಡಲಾಯಿತು.


ಸಂಘಟನೆಯ ಪ್ರಾಂತ, ಜಿಲ್ಲೆ, ತಾಲೂಕು ಮತ್ತು ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.





























