ಪುತ್ತೂರು : ವಿಕಲಚೇತನಾ ವೃತ್ತಿ ಮತ್ತು ಪುನರ್ವಸತಿ ಕೇಂದ್ರ ಪ್ರಜ್ಞಾ ಆಶ್ರಮದಲ್ಲಿ ಪುತ್ತಿಲ ಪರಿವಾರದ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ ಆ.30ರಂದು ಜರುಗಿತು.

ಆಶ್ರಮದಲ್ಲಿ ರಕ್ಷಾ ಬಂಧನ ಆಚರಿಸಿ, ಸಿಹಿತಿಂಡಿ ವಿತರಣೆ ಮಾಡಲಾಯಿತು.

ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಮಾರ್ತಾ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು ಸಹಿತ ಪುತ್ತಿಲ ಪರಿವಾರದ ಪ್ರಮುಖರು ಉಪಸ್ಥಿತರಿದ್ದರು.


























