ವಿಟ್ಲ : ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ (ರಿ ) ಮಂಗಳೂರು (ದ. ಕ ಮತ್ತು ಉಡುಪಿ ಜಿಲ್ಲೆ )ವಿಟ್ಲ ವಲಯದ ಮಹಾಸಭೆ ಮತ್ತು ಪದಗ್ರಹಣ ಸಮಾರಂಭವು ದಿನಾಂಕ 27.8.2023ರಂದು ಭಾರತ್ ಆಡಿಟೋರಿಯಂ ಚಂದಳಿಕೆ ವಿಟ್ಲ ದಲ್ಲಿ ಜರುಗಿತು.

ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿಯವರು ಸಂಘಟನೆ, ಸಂಸ್ಕಾರಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಹಾದಿ ತೋರಿಸುತ್ತದೆ. ಈ ನೆಲೆಯಲ್ಲಿ ಸಂಘವು ಮಾಡುತ್ತಿರುವ ಕಾರ್ಯ ಶ್ಲಾಘನೀಯವೆಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಜನಾರ್ಧನ ಅತ್ತಾವರ (ಪ್ರಸಕ್ತ ಅಧ್ಯಕ್ಷರು ದ. ಕ ಗ್ಯಾರೇಜ್ ಮಾಲಕರ ಸೌಹಾರ್ದ ಸಹಕಾರಿ ಸಂಘ (ನಿ)ಮಂಗಳೂರು), ದಿನೇಶ್ ಕುಮಾರ್ (ನಿಕಟ ಪೂರ್ವ ಅಧ್ಯಕ್ಷರು,ಗ್ಯಾರೇಜ್ ಮಾಲಕರ ಸಂಘ (ರಿ )ಮಂಗಳೂರು), ಚಂದ್ರಶೇಖರ ಭಟ್ ಪಡಾರು (ಲೆಕ್ಕ ಪರಿಶೋಧಕರು ಗ್ಯಾರೇಜ್ ಮಾಲಕರ ಸಂಘ ವಿಟ್ಲ ವಲಯ)ಹರೀಶ್ ಆಚಾರ್ಯ ವಿ (ಗೌರವ ಅಧ್ಯಕ್ಷರು, ಗ್ಯಾರೇಜ್ ಮಾಲಕರ ಸಂಘ ವಿಟ್ಲ ವಲಯ),ಸರಪಾಡಿ ಅಶೋಕ ಶೆಟ್ಟಿ (ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ) ಇವರನ್ನು ಸನ್ಮಾನಿಸಲಾಯಿತು.
ಈರ್ವರು ವಿದ್ಯಾರ್ಥಿಗಳಾದ ಸಜನ್ ಕುಮಾರ್ ಹಾಗೂ ಮೋನಿಷ್ ವಿಟ್ಲ ರವರಿಗೆ ವಿದ್ಯಾರ್ಥಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ರೆ. ಫಾ. ಸುನಿಲ್ ಪ್ರವೀಣ್ ಪಿಂಟೋ , ಧರ್ಮಗುರುಗಳು ದೇಲಂತಬೆಟ್ಟು ಚರ್ಚ್,ದಿನಕರ ಕುಲಾಲ್ ಉಪಾಧ್ಯಕ್ಷರು ಗ್ಯಾರೇಜ್ ಮಾಲಕರ ಸಂಘ (ರಿ )ಮಂಗಳೂರು, ಸಂಜೀವ ಪೂಜಾರಿ ಉದ್ಯಮಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ವಿಟ್ಲ ಭಾಗವಹಿಸಿದ್ದರು.
ಸಭಾಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ವಿಟ್ಲ ವಲಯದ ಅಧ್ಯಕ್ಷ ಬಿ. ಕೆ. ಬಾಬು ರವರು ವಹಿಸಿದ್ದರು. ವಾರ್ಷಿಕ ವರದಿಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಬಿ ವಾಚಿಸಿದರು. ಹಿರಿಯ ಸದಸ್ಯ ಮತ್ತು ಪ್ರಸಕ್ತ ಲೆಕ್ಕ ಪರಿಶೋಧಕರಾದ ಚಂದ್ರಶೇಖರ ಭಟ್ ರವರು ಪ್ರಸ್ತಾವನೆಗೈದರು. ಗೌರವ ಸಲಹೆಗಾರರಾದ ನೆಗಳಗುಳಿ ಸುಂದರ ಆಚಾರ್ಯ ಸ್ವಾಗತಗೈದರು.
ವಿವಿಧ ವಲಯ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಾದ ಲಿಯೊ ಡಿ.ಲಸ್ರಾದೋ (ಅಧ್ಯಕ್ಷರು), ಲಕ್ಷ್ಮಣ ಬಿ. ಯಸ್ (ಕಾರ್ಯದರ್ಶಿ),ಚಂದ್ರಶೇಖರ ಭಟ್ (ಲೆಕ್ಕ ಪರಿಶೋಧಕರು), ಪುರುಷೋತ್ತಮ. ಎಂ (ಕೋಶಾಧಿಕಾರಿ), ಉಮ್ಮರ್ (ಸಂಚಾಲಕರು) ಹಾಗೂ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಮುಂದಿನ ವರ್ಷಗಳ ಜವಾಬ್ಧಾರಿಯನ್ನು ಹಸ್ತಾಂತರಿಸಲಾಯಿತು.
ವಿದ್ಯಾರ್ಥಿ ಪ್ರಣಾಮ್ ಪ್ರಾರ್ಥಿಸಿದ ಕಾರ್ಯಕ್ರಮವನ್ನು ರಾಧಾಕೃಷ್ಣ ಎರುಂಬು ಹಾಗೂ ಪರಮೇಶ್ವರ ಆಚಾರ್ಯ ಮಂಕುಡೆ ನೆಡ್ಯಾಳ ನಿರೂಪಿಸಿ, ವಂದನಾರ್ಪಣೆಗೈದರು.


























